ಡಿಕೆಶಿ- ಸಿದ್ದು ವಿರುದ್ಧ ಘಟಾನುಘಟಿ ನಾಯಕರು: ಸಿಎಂ ಹೇಳಿದ್ದೇನು ?
ಡಿಕೆಶಿ- ಸಿದ್ದು ವಿರುದ್ಧ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿದೆ ಬಿಜೆಪಿ. ಅಶೋಕ್ ಹಾಗೋ ಸೋಮಣ್ಣನವರೇ ಏಕೆ? ಏನಿದರ ಹಿಂದಿನ ತಂತ್ರ? ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು..
ವಿಧಾನಸಭಾ ಕ್ಷೇತ್ರಗಳಿಗೆ ಕಮಲ ಪಾಳಯವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಅಳೆದು ತೂಗಿ ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿರುವ ಕೇಸರಿ ನಾಯಕರು 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದ್ದಾರೆ. ಈ ಬಾರಿ ಟಿಕೆಟ್ ಹಂಚಿಕೆ ಸ್ವಲ್ಪ ವಿಶಿಷ್ಟವಾಗಿದ್ದು, ಆರ್ ಅಶೋಕ್ ಹಾಗು ಸೋಮಣ್ಣಗೆ 2 ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದ್ದು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡುವ ಕನಕಪುರ ಕ್ಷೇತ್ರದಿಂದ ಮತ್ತು ಪದ್ಮನಾಭನಗರದಿಂದ ಆರ್ ಅಶೋಕ್ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವರುಣಾ ಕ್ಷೇತ್ರ ಹಾಗು ಚಾಮರಾಜನಗರ ಕ್ಷೇತ್ರದಿಂದ ವಿ ಸೋಮಣ್ಣ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.