ಕರಾವಳಿಯಲ್ಲಿ ಮೋದಿಗೆ ಭರ್ಜರಿ ಸ್ಪಂದನೆ: ರುದ್ರಾಕ್ಷಿ ಹಾರ ಹಾಕಿ ಸ್ವಾಗತ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಮತಬೇಟೆ ನಡೆಸಿದ್ದು, ಮೂಡಬಿದಿರೆಯ ಮುಲ್ಕಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

First Published May 3, 2023, 2:20 PM IST | Last Updated May 3, 2023, 2:20 PM IST

ಪ್ರಧಾನಿ ನರೇಂದ್ರ ಮೋದಿ  ಕರ್ನಾಟಕ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಇಂದು  ಮಂಗಳೂರಿನಲ್ಲಿ ಪ್ರಧಾನಿ ಮೋದಿ ಮತಬೇಟೆ ನಡೆಸಿದರು. ಮೂಡಬಿದಿರೆಯ ಮುಲ್ಕಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಜನರತ್ತ ಕೈಬೀಸಿದ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಘೋಷಣೆಗಳು ಮೊಳಗಿದವು. ಈ ವೇಳೆ ರುದ್ರಾಕ್ಷಿ ಮಾಲೆ ಹಾಕಿ ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ, ಕೃಷ್ಣನ ವಿಗ್ರಹ, ನರಸಿಂಹನ ಪ್ರಸಾದ ನೀಡಿ ಮೋದಿ ಅವರನ್ನು ಗೌರವಿಸಲಾಯಿತು.

Video Top Stories