Amit Shah Interview ಧರ್ಮಾಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ, ಕಾಂಗ್ರೆಸ್ ತಪ್ಪು ಸರಿಮಾಡಿದ್ದೇವೆ!

ಒಂದು ವರ್ಷ ಮುಂಚೆ ಮಾಡಬೇಕಿತ್ತು. ಸ್ವಲ್ಪ ತಡವಾಗಿದೆ. ಸಂವಿಧಾನಕ್ಕೆ ವಿರೋಧವಾಗಿ ಕಾಂಗ್ರೆಸ್ ಕೆಲ ತಪ್ಪು ಮಾಡಿತ್ತು. ಅದನ್ನು ಸರಿಪಡಿಸಿದ್ದೇವೆ. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಯಾವುದೇ ಧರ್ಮದ ಹಿಂದುಳಿದವರಿಗೆ ಮೀಸಲಾತಿ ಬೇಕು. ಇಡೀ ಧರ್ಮಕ್ಕಲ್ಲ ಎಂದು ಅಮಿತ್ ಶಾ ಕರ್ನಾಟಕ ಮೀಸಲಾತಿ ನಿರ್ಧಾರ ಸಮರ್ಥಿಸಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ ಸ್ಫೋಟಕ ಮಾತುಗಳು ಇಲ್ಲಿವೆ.

First Published Apr 30, 2023, 10:04 PM IST | Last Updated Apr 30, 2023, 10:14 PM IST

ಬೆಂಗಳೂರು(ಏ.30): ಧರ್ಮ ಆಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ಧವಾಗಿದೆ.ಕಾಂಗ್ರೆಸ್ ಮಾಡಿದ ತಪ್ಪನ್ನು ನಾವು ಸರಿಪಡಿಸಿದ್ದೇವೆ. ಮುಸ್ಲಿಮ್ ಮೀಸಲಾತಿಯನ್ನು ವರ್ಷದ ಮುಂಚಯೇ ತೆಗೆಯಬೇಕಿತ್ತು. ಸ್ವಲ್ಪ ತಡವಾಗಿದೆ. ಇನ್ನೂ ತಡಮಾಡುವುದು ಸರಿಯಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.  ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡುವ ಪ್ರಶ್ನೆಯಿಲ್ಲ. ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.  ಅಭಿವೃದ್ಧಿ ಕರ್ನಾಟಕಕ್ಕೆ ಜನ ಬಿಜೆಪಿಗೆ ಮತನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ಇಂದಲ್ಲ, ಭವಿಷ್ಯದಲ್ಲೂ ಮೈತ್ರಿ ಇಲ್ಲ ಎಂದು ಶಾ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ ಎಂದು ಕರ್ನಾಟಕ ಜನರಿಗೆ ಅಮಿತ್ ಶಾ ಸೂಚಿಸಿದ್ದಾರೆ.  ಅಮಿತ್ ಶಾ ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ. 

Video Top Stories