ಯಾರ ಭದ್ರಕೋಟೆಯೂ ಇರಲ್ಲ, ಪ್ರೀತಿ ಒಂದೇ ನಮ್ಮ ಭದ್ರಕೋಟೆ: ಸುಮಲತಾ

ಜೆಡಿಎಸ್‌ನ ಭದ್ರ ಕೋಟೆ ಬೊಂಬೆಗಳ ನಗರಿ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಭರ್ಜರಿ  ಚುನಾವಣಾ ಪ್ರಚಾರ ಮಾಡಿದ್ದು ಈ ಸಂದರ್ಭದಲ್ಲಿ ಯಾವ ಅಧಿಕಾರವು ಶಾಶ್ವತ ಅಲ್ಲ, ಯಾರದ್ದು ಭದ್ರಕೋಟೆ  ಇರಲ್ಲ, ಪ್ರೀತಿ ಒಂದೇ ನಮ್ಮ ಭದ್ರಕೋಟೆ ಎಂದು ಸಂಸದೆ ಸುಮಲತಾ ಹೇಳಿದರು

First Published Apr 30, 2023, 5:23 PM IST | Last Updated Apr 30, 2023, 5:23 PM IST

ಜೆಡಿಎಸ್‌ನ ಭದ್ರ ಕೋಟೆ ಬೊಂಬೆಗಳ ನಗರಿ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಭರ್ಜರಿ  ಚುನಾವಣಾ ಪ್ರಚಾರ ಮಾಡಿದ್ದು ಈ ಸಂದರ್ಭದಲ್ಲಿ ಯಾವ ಅಧಿಕಾರವು ಶಾಶ್ವತ ಅಲ್ಲ, ಯಾರದ್ದು ಭದ್ರಕೋಟೆ  ಇರಲ್ಲ, ಪ್ರೀತಿ ಒಂದೇ ನಮ್ಮ ಭದ್ರಕೋಟೆ ಎಂದು ಸಂಸದೆ ಸುಮಲತಾ ಹೇಳಿದರು. ಹಾಗೇ  ಕುಟುಂಬ ರಾಜಕಾರಣದ ವಿರುದ್ಧ , ದ್ವೇಷದ ರಾಜಕಾರಣ ವಿರುದ್ದ, ಮೋಸದ ರಾಜಕಾರಣ ವಿರುದ್ದ ಚನ್ನಪಟ್ಟಣದ ಜನತೆ ದೃಢ ನಿರ್ಧಾರ ಮಾಡಿ ಯಾವ ಪಕ್ಷಕ್ಕೆ  ವೋಟ್‌ ಹಾಕುತ್ತಿರಾ..? ಎಂದು ಪ್ರಶ್ನಿಸಿದರು. ಇನ್ನು  ಅಭಿವೃದ್ದಿಯೇ ಮಂತ್ರ ಎಂದು ಹಗಲಿರುಳು ಸೇವೆ ಮಾಡುವ ಪ್ರಧಾನ ಮಂತ್ರಿಗಳಿಗೆ ಸ್ವಾಗತ ಕೋರುವುದು ಕೇವಲ ಇವತ್ತಿನ ದಿನವಲ್ಲ ಮೇ 10  ರಂದು ರಾಮನಗರ ಜನತೆ ಆಶೀರ್ವಾದ ದಿಂದ  ಬಿಜೆಪಿ ಭಾವುಟ ಹಾರಿಸುವ ಮೂಲಕ  ಪ್ರಧಾನ ಮಂತ್ರಿಗಳಿಗೆ ಸ್ವಾಗತದ ಉಡುಗೊರೆಯನ್ನು ಬಯಸುತ್ತೇವೆ ಎಂದು ಹೇಳಿದರು . ಹಾಗೇ  ಸಿ.ಪಿ.ಯೋಗಿಶ್ವರ ಗೆಲ್ಲಿಸುತ್ತಿರಾ ಎಂದು ಗೊತ್ತಿದೆ ಎಂದು ಹೇಳಿದರು  

Video Top Stories