ಕರ್ನಾಟಕ ರಣಕ್ಷೇತ್ರದಲ್ಲಿ “ಶಾ”ರಣವ್ಯೂಹ..ಹೇಗಿದೆ ಗೊತ್ತಾ ಕೇಸರಿ ಚಾಣಕ್ಯನ ಕರ್ನಾಟಕ ಕಬ್ಜ ಪ್ಲಾನ್..?
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿ. ಫೀಲ್ಡ್'ನಲ್ಲಿ ಏನ್ ನಡೀತಾ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಬರುತ್ತೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಅಂತ ಕೆಲ ಸರ್ವೇಗಳು ಹೇಳುತ್ತಿವೆ . ಮತ್ತೊಂದೆಡೆ ಯಾವ ಪಕ್ಷಕ್ಕೂ ಬಹುಮತ ಇಲ್ಲ ಅಂತ ಸಮೀಕ್ಷೆಗಳು ಭವಿಷ್ಯ ನುಡಿದಿವೆ. . ಆದರೆ ಅಮಿತ್ ಶಾ ಹೇಳುತ್ತಿರುವುದು ಬೇರೆ. ಫೀಲ್ಡ್'ನಲ್ಲಿ ಏನ್ ನಡೀತಾ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕದಲ್ಲಿ ಈ ಬಾರಿ ನಮ್ಮದೇ ಸರ್ಕಾರ ಅಂತ ಚುನಾವಣಾ ಚಾಣಕ್ಯ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಮಾತಿನಲ್ಲಿ ಆಡಿದ್ದನ್ನು ಕೃತಿಯಲ್ಲಿ ಮಾಡಿ ತೋರಿಸುವುದು ಅಮಿತ್ ಶಾ ಸ್ಟೈಲ್. ಹೀಗಾಗಿ ಕುರುಕ್ಷೇತ್ರಕ್ಕೆ ನುಗ್ಗಿದವರು ಕೇಸರಿ ಶಿಬಿರದಲ್ಲಿ ಯುದ್ಧನೀತಿ, ರಾಜತಂತ್ರ, ರಣತಂತ್ರಗಳನ್ನು ಹೆಣೆದಿದ್ದಾರೆ.
ಇನ್ನು ಯುದ್ಧಭೂಮಿಯಲ್ಲಿ ಬಿಜೆಪಿಗೆ ಎದುರಾಗಿರುವ ದೊಡ್ಡ ಸವಾಲು ಶೆಟ್ಟರ್ ಮತ್ತು ಸವದಿ ಪಕ್ಷಾಂತರ. ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆಗಿದ್ದೇ ತಡ.. ರಾಜ್ಯ ಬಿಜೆಪಿಯ ಮುಂಚೂಣಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿಗೆ ಗುಡ್ ಬೈ ಹೇಳಿ ಎದುರಾಳಿ ಕಾಂಗ್ರೆಸ್ ಪಾಳೆಯ ಸೇರಿದ್ದಾರೆ. ಶೆಟ್ಟರ್-ಸವದಿ ಪಕ್ಷಾಂತರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇದರ ಬಗ್ಗೆ ಅಮಿತ್ ಶಾ ಏನ್ ಹೇಳಿದ್ರು ಗೊತ್ತಾ..? ಈ ವಿಡಿಯೋ ನೋಡಿ