ಮೊದಲ ಪಟ್ಟಿ ಸಲೀಸು.. 2ನೇ ಪಟ್ಟಿ ಬಿರುಸು.. ಕೈಗೆ ಟೆನ್ಶನ್ ..!
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ಮಧ್ಯೆ ಕಾಂಗ್ರೆಸ್‌ಗೆ ಬಂಡಾಯ ಬಿಸಿ ಮರುಕಳಿಸುವ ಸೂಚನೆ ಕಾಣುತ್ತಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಾಂಗ್ರೆಸ್‌ನ ದಂಡನಾಯಕರು, ಮುಖ್ಯಮಂತ್ರಿ ಅಭ್ಯರ್ಥಿಗಳು. ಮುಖ್ಯಮಂತ್ರಿ ಪಟ್ಟ ಸಿಗಬೇಕು ಅಂದರೆ ಮೊದಲು 224 ಸ್ಥಾನಗಳಲ್ಲಿ 113 ಸೀಟುಗಳನ್ನು ಗೆಲ್ಲಬೇಕು . ಆ ಹಾದಿಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟು ಬಿಟ್ಟಿತ್ತು. ಅದು ಹೇಗಂದ್ರೆ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮೂಲಕ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಂಪ ರಾಮಾಯಣ ಇಲ್ಲದೆ ರಿಲೀಸ್ ಆಗಿದೆ. ಆದ್ರೆ ಕಾಂಗ್ರೆಸ್‌ಗೆ ತಲೆನೋವು ತಂದಿರುವುದು 100 ಕ್ಷೇತ್ರಗಳ 2ನೇ ಪಟ್ಟಿ.ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದೆ. ರಾಜ್ಯದಲ್ಲಿ ಮೇ 10ರ ಬುಧವಾರ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಅವತ್ತೇ ಫಲಿತಾಂಶವೂ ಪ್ರಕಟವಾಗಲಿದೆ. ಪ್ರತೀ ಚುನಾವಣೆಯಲ್ಲಿ ಕೈ ಪಾಳೆಯಕ್ಕೆ ಬಂಡಾಯದ ಬಿಸಿ ತಟ್ಟೋದು ಸರ್ವೇ ಸಾಮಾನ್ಯ. ಬಂಡಾಯದ ಕಾರಣಕ್ಕೆ ಕಾಂಗ್ರೆಸ್ ದೊಡ್ಡ ಮಟ್ಟದ ಹಿನ್ನಡೆ ಎದುರಿಸ್ತಾ ಬಂದಿದೆ. ಈ ಬಾರಿಯೂ ಬಂಡಾಯ ಮರುಕಳಿಸುವ ಸೂಚನೆ ಸಿಕ್ತಾ ಇದೆ.