ಸಮಾಜದ ವಿಷವನ್ನು ಕುಡಿದು ಸಮಾಜಕ್ಕೆ 'ಅಮೃತ' ನೀಡಿದವರು ಮೋದಿ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೀದರ್ನ ಹುಮ್ನಾಬಾದ್ನಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿ ಮಾತನಾಡಿ ಸಮಾಜದ ವಿಷವನ್ನು ಕುಡಿದು ಸಮಾಜ ಸೇವೆ ಮಾಡಿದವರಿದ್ದರೆ ಅದು ಪ್ರಧಾನಿ ಮೋದಿ ಎಂದು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬೀದರ್ನ ಹುಮ್ನಾಬಾದ್ನಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿ ಮಾತನಾಡಿದರು. ವಿಶ್ವದ ಮೊದಲ ಪ್ರಜಾಪ್ರಭುತ್ವದ ಮೊದ ಸಂಕೇತ ಅನುಭವ ಮಂಟಪ. ಇದನ್ನು ಗುರುತಿಸಿದವರು ಪ್ರಧಾನಿ ಮೋದಿಯವರು ಎಂದು ಹೇಳಿದರು. ಪ್ರಜಾಪ್ರಭುತ್ವ ಎಂದರೆ ಸಮಾನತೆ ಇದನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ, ಬೀದರ್ಗೆ, ಕಲಬುರ್ಗಿಗೆ ಹೊಸ ಟೆಕ್ಸ್ಟೈಲ್ ಪಾರ್ಕ್ಅನ್ನು ಪ್ರಧಾನಿ ಮೋದಿಯ ನೇತೃತ್ವದಲ್ಲಿ ನಡೆದಿದ್ದು, ಒಂದು ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಖರ್ಗೆ ನೀಡಿದ್ದ “ವಿಷ” ಹೇಳಿಕೆಯನ್ನು ನೆನಪಿಸಿ, “ಸಮಾಜದ ವಿಷವನ್ನು ಕುಡಿದು ಸಮಾಜಕ್ಕೆ 'ಅಮೃತ' ನೀಡಿದವರುವರಿದ್ದರೆ ಅದು ಪ್ರಧಾನಿ ಮೋದಿ” ಎಂದು ಕಾಂಗ್ರೆಸ್ಗೆ ತಿರುಗೇಟನ್ನೂ ನೀಡಿದ್ದಾರೆ.