ಇಂದು ಬಹಿರಂಗ ಪ್ರಚಾರಕ್ಕೆ ತೆರೆ: ತವರು ಕ್ಷೇತ್ರದಲ್ಲಿ ಬೊಮ್ಮಾಯಿ ಭರ್ಜರಿ ಪ್ರಚಾರ

ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ವಿಧಾನಸಭೆ ಚುನಾವಣೆಗೆ ಎರಡು ದಿನ ಬಾಕಿ ಇದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ.. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಯ  ವನಹಳ್ಳಿಯಲ್ಲಿ ಬೃಹತ್ ರ್ಯಾಲಿ ಮಾಡಿದರು. 

First Published May 8, 2023, 1:22 PM IST | Last Updated May 8, 2023, 1:22 PM IST

ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ವಿಧಾನಸಭೆ ಚುನಾವಣೆಗೆ ಎರಡು ದಿನ ಬಾಕಿ ಇದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ.. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಯ  ವನಹಳ್ಳಿಯಲ್ಲಿ ಬೃಹತ್ ರ್ಯಾಲಿ ಮಾಡಿದರು. ರ್ಯಾಲಿಯನ್ನು ಉದ್ದೇಶಿಸಿ ಮತಯಾಚನೆ ಮಾಡುವಾಗ ಮಾತನಾಡಿ ಶಿಗ್ಗಾಂವಿಯ 136 ಹಳ್ಳಿಗಳಿಗೆ ಮನೆ ಮನೆಗೆ ನೀರು ಕೊಡುವ  ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು. ಹಾಗೇ ಆರು ಸಾವಿರಕ್ಕೂ ಹೆಚ್ಚು ಮನೆಯನ್ನು ಕಟ್ಟಲಾಗಿದ್ದು, ಇನ್ನು ಕೆಲವು ಮನೆ ಕಟ್ಟುವುದು ಬಾಕಿ ಇದೆ. ಚುನಾವಣೆ ಮುಗಿದ ನಂತರ ಮತ್ತೆ ಸರ್ವೆ ಮಾಡಿ ಕಾನೂನಾತ್ಮಕವಾಗಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು . ಅದಲ್ಲದೆ ಪ್ರಣಾಳಿಕೆಯಲ್ಲಿ ಇರುವಂತೆ  ಬಸವ ವಸತಿ ಮನೆ ಯೋಜನೆ ಅಡಿಯಲ್ಲಿ ಇರುವ 2 ಲಕ್ಷ ಅನುಧಾನವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು. 

Video Top Stories