ಕೊನೆ ಓವರ್‌ನಲ್ಲಿ ಬಿಜೆಪಿಗೆ ಫ್ರೀ ಹಿಟ್ ಚಾನ್ಸ್, ಕಾಂಗ್ರೆಸ್ ಕೈಸುಟ್ಟಿತು ಬಜರಂಗದಳ ನಿಷೇಧ ಪ್ರಾಮಿಸ್!
ಕಾಂಗ್ರೆಸ್ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ, ಹನುಮಾನ್ ಚಾಲಿಸ ಪಠಣ, ಬಜರಂಗದಳ ಬ್ಯಾನ್ ನಿರ್ಧಾರ ಸಮರ್ಥಿಸಿದ ಕಾಂಗ್ರೆಸ್, ಕಾಂಗ್ರೆಸ್ ಭಜರಂಗದಳ ನಿಷೇಧ ಘೋಷಣೆ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಘೋಷಣೆ ಇದೀಗ ಕೈನಾಯಕರ ಕೈಸುಟ್ಟಿದೆ. ಇದರ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ. ತಾಲಿಬಾನ್ ಸರ್ಕಾರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಕಾಂಗ್ರೆಸ್ ತಮ್ಮ ಕಾಲಿಗೆ ತಾನೇ ಕಲ್ಲು ಹಾಕಿಕೊಂಡಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿನ ಚುನಾವಣಾ ಪ್ರಚಾರದಲ್ಲಿ ಜೈ ಭಜರಂಗ ಬಲಿ ಎಂದು ಭಾಷಣ ಆರಂಭಿಸುವ ಮೂಲಕ ಕಾಂಗ್ರೆಸ್ ಬಜರಂಗದಳ ನಿಷೇಧ ಭರವಸೆಗೆ ತಿರುಗೇಟು ನೀಡಿದ್ದಾರೆ. ಪ್ರತಿ ಸಮಾವೇಶದಲ್ಲೂ ಇದೀಗ ಭಜರಂಗಬಲಿ ಸದ್ದು ಮಾಡುತ್ತಿದೆ.ಕಾಂಗ್ರೆಸ್ ಮಾಡಿದ ಒಂದು ಘೋಷಣೆಗೆ ಇಡೀ ದೇಶದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದೆ.