Asianet Suvarna News Asianet Suvarna News

ಬೆಳ್ಳಂಬೆಳಗ್ಗೆ ಈಶ್ವರಪ್ಪಗೆ ಮೋದಿ ಕರೆ, ಚುನಾವಣೆ ಬಗ್ಗೆ ಚರ್ಚೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು.ಈ ವೇಳೆ   ಈಶ್ವರಪ್ಪ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಈ ರೀತಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಪಕ್ಷ, ಸಂಘಟನೆ ಸದಾ ನಿಮ್ಮೊಂದಿಗೆ ಇದೆ ಎಂದು ಹೇಳಿದ್ದಾರೆ. ಇನ್ನು ಕರೆಯಲ್ಲಿ  ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದು,  ಶಿವಮೊಗ್ಗದಲ್ಲಿ ಬಿಜೆಪಿ  ಗೆಲ್ಲುವುದಾಗಿ ಭರವಸೆ ನೀಡಿದ್ದಾರೆ. ಈ ಮೊಬೈಲ್ ಸಂಭಾಷಣೆಯಿಂದ ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಿರಿಯರೊಂದಿಗೆ  ಹಾಗೂ  ಸಾಮಾನ್ಯ ಕಾರ್ಯಕರ್ತರ ಪರವಾಗಿ ಸದಾ ಇರುತ್ತಾರೆ  ಎಂಬುದಕ್ಕೆ  ಸಾಕ್ಷಿಯಾಗಿದೆ.