ನಮೋ ಕೈಗೆ "ನಿಂದನಾಸ್ತ್ರ" ಕೊಟ್ಟ ಖರ್ಗೆ.."ಮೋದಿಗೆ ಬೈದರೆ 'ಕಮಲ' ವಿಜಯ.." ಏನಿದರ ಗುಟ್ಟು..?
ಬಿಜೆಪಿ ಬತ್ತಳಿಕೆಯ ಅತೀ ದೊಡ್ಡ ಅಸ್ತ್ರ ಚುನಾವಣಾ ಸುನಾಮಿ ಕರ್ನಾಟಕ ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನವೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಿದ ಮೋದಿ, ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಕುರುಕ್ಷೇತ್ರಕ್ಕೆ ಕಿಚ್ಚು ಹೊತ್ತಿಸಿದ್ದಾರೆ
ಬಿಜೆಪಿ ಬತ್ತಳಿಕೆಯ ಅತೀ ದೊಡ್ಡ ಅಸ್ತ್ರ ಚುನಾವಣಾ ಸುನಾಮಿ ಕರ್ನಾಟಕ ಕುರುಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನವೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಿದ ಮೋದಿ, ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಕುರುಕ್ಷೇತ್ರಕ್ಕೆ ಕಿಚ್ಚು ಹೊತ್ತಿಸಿದ್ದಾರೆ.ಮಾತಿಗೆ ನಿಂತರೆ ಜನರನ್ನು ಮಂತ್ರಮುಗ್ಧಗೊಳಿಸುವ ಶಕ್ತಿ ಮೋದಿಗಿದೆ. ಒಂದು ಸಣ್ಣ ಅಸ್ತ್ರ ಸಿಕ್ಕಿದ್ರೆ ಸಾಕು, ಅದನ್ನೇ ಬ್ರಹ್ಮಾಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಖರ್ಗೆಯವರಹೇಳಿಕೆಯನ್ನು ಇಟ್ಕೊಂಡು, ಬೀದರ್'ನ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಜನ್ಮಜಾಲಾಡಿ ಬಿಟ್ರು ಪ್ರಧಾನಿ ಮೋದಿ. ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ನಾಯಕರು ಇಲ್ಲಿವರೆಗೆ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು 91 ಬಾರಿ ನಿಂದಿಸಿದ್ದಾರಂತೆ ಎಂದು ಮೋದಿ ಲೆಕ್ಕ ಲೆಕ್ಕಕೊಟ್ಟಿದ್ದಾರೆ. ಖರ್ಗೆ ಕೋಟೆಯಲ್ಲೇ ನಿಂತು ಮೋದಿ ಈ ಲೆಕ್ಕ ಕೊಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ನಿಂದನಾತ್ಮಕ ಮಾತುಗಳನ್ನು ಉಲ್ಲೇಖಿಸಿ, ಹಳೆ ಚರಿತ್ರೆಯನ್ನು ನೆನಪಿಸಿ ಕಾಂಗ್ರೆಸ್'ಗೆ ಮೋದಿ ಟಕ್ಕರ್ ಕೊಟ್ಟಿದ್ದಾರೆ. ಕರ್ನಾಟಕ ಕುರುಕ್ಷೇತ್ರದ ರಣರಂಗಕ್ಕೆ ಧುಮುಕಿದ ಮೊದಲ ದಿನವೇ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಬಾಬಾ ಸಾಹೇಬ ಡಾ.ಅಂಬೇಡ್ಕರ್, ವೀರ ಸಾವರ್ಕರ್ ಅವರನ್ನೇ ಬಿಡದ ಕಾಂಗ್ರೆಸ್ ನಾಯಕರು ನನ್ನನ್ನು ಬಿಡ್ತಾರಾ ಅಂತ ಪ್ರಶ್ನಿಸಿದ್ದಾರೆ.