6 ಪ್ರಾಂತ್ಯಗಳಲ್ಲಿ 20ಕ್ಕೂ ಅಧಿಕ ಮೋದಿ ಪ್ರವಾಸ, ಮತ ದಂಡಯಾತ್ರೆ ಹಿಂದಿದೆಯಾ ಮಹಾರಹಸ್ಯ!

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ಹೀಗಾಗಿ ಕರ್ನಾಟಕದ 6 ಪ್ರಾಂತ್ಯಗಳಲ್ಲಿ 20ಕ್ಕೂ ಅಧಿಕ ಪ್ರವಾಸ ಮಾಡಲಿರುವ ಮೋದಿ.. ಇದು ಬರೀ ಪ್ರವಾಸವಲ್ಲ, ಅಕ್ಷರಶಃ ಮತ ದಂಡಯಾತ್ರೆ. ಇದರ ಹಿಂದಿರೋ ರಹಸ್ಯವೇನು..? ಈ ವಿಡಿಯೋ ನೋಡಿ 

First Published Apr 4, 2023, 1:03 PM IST | Last Updated Apr 4, 2023, 1:03 PM IST

ರಾಜ್ಯ ರಾಜಕೀಯ ರಣಾಂಗಣ ದಿನದಿನಕ್ಕೂ ಹೊಸ ರೂಪ ಸ್ವರೂಪ ಪಡೆದಿದ್ದು, ಪ್ರತಿ ಮತಕ್ಷೇತ್ರವೂ ಕುರುಕ್ಷೇತ್ರವಾಗಿ ಬದಲಾಗಿದೆ.  ಚುನಾವಣೆ ಸಂಗ್ರಾಮ ಗೆಲ್ಲಲು, ಮೂರೂ ಪಕ್ಷ ಶತಪ್ರಯತ್ನ ಮಾಡುತ್ತಿದೆ. ಎಲ್ಲಾ ಪಕ್ಷಗಳು, ಎದುರಾಳಿ ಪಾಳಯವನ್ನ ಕಟ್ಟಿಹಾಕಲು ಅಸ್ತ್ರ ಪ್ರಯೋಗ ನಡೆಸ್ತಾ ಇದ್ದರೆ, ಬಿಜೆಪಿ ಮಾತ್ರ ಬೇರೆ  ಪ್ಲಾನ್‌ ರೂಪಿಸಿಕೊಂಡ ಹಾಗೆ ಕಾಣುತ್ತಿದೆ. ಪ್ರಧಾನಿ ಮೋದಿ  ಪಾಲಿಗೆ ಕರ್ನಾಟಕದಲ್ಲಿ ಕಮಲ  ಅರಳಿಸುವುದು   ಮುಖ್ಯವಾದ ಟಾರ್ಗೆಟ್. ಅದಕ್ಕೆ ಕಾರಣ ಈಗಾಗಲೇ  ದೇಶದ ಬಹುತೇಕ ರಾಜ್ಯಗಳಲ್ಲಿ ತನ್ನ ಇರುವಿಕೆಗೆ  ಸಂಚಕಾರ ತಂದುಕೊಂಡಿರುವ ಕಾಂಗ್ರೆಸ್, ಬಲಿಷ್ಠವಾಗಿರುವುದು ಕರ್ನಾಟಕದಲ್ಲಿ ಮಾತ್ರ.. ಹಾಗಾಗಿ ಇಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಕಾಂಗ್ರೆಸ್ ವಿರುದ್ಧ ಗೆದ್ದ ಹಾಗೆ ಮಾತ್ರವೇ ಅಲ್ಲ, ಕೇಸರಿ ಪಡೆಗೆ ದಕ್ಷಿಣ ಭಾರತದಲ್ಲೊಂದು ಬಲಿಷ್ಟ ಭದ್ರ ಕೋಟೆ ನಿರ್ಮಾಣವಾದ ಹಾಗೆ. ಹೀಗಾಗಿ ಕರ್ನಾಟಕದ 6 ಪ್ರಾಂತ್ಯಗಳಲ್ಲಿ 20ಕ್ಕೂ ಅಧಿಕ ಪ್ರವಾಸ ಮಾಡಲಿರುವ ಮೋದಿ.. ಇದು ಬರೀ ಪ್ರವಾಸವಲ್ಲ, ಅಕ್ಷರಶಃ ಮತ ದಂಡಯಾತ್ರೆ. ಇದರ ಹಿಂದಿರೋ ರಹಸ್ಯವೇನು..? ಈ ವಿಡಿಯೋ ನೋಡಿ 
 

Video Top Stories