ಕರ್ನಾಟಕದಲ್ಲಿ ಮೋದಿ ಅಲೆ, ನಾಳೆ ಕೋಟೆ ನಾಡಿನಲ್ಲಿ 'ನಮೋ' ಮತಬೇಟೆ ..!

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನ ಹೆಚ್ಚಿಸಿದ್ದು, ಹಲವು ಪ್ರಯತ್ನಗಳನ್ನ ನಡೆಸಿದ್ದಾರೆ.ಈಗಾಗಲೇ ಜಾತಿವಾರು ಹಾಗೂ ಪ್ರಾದೇಶವಾರು ಕಣ್ಣೀಟ್ಟಿರುವ ಬಿಜೆಪಿ ಪ್ರಧಾನಿ ಮೋದಿ  ಮೂಲಕ ಮತಯಾಚನೆ ಮಾಡುತ್ತಿದ್ದು, ನಾಳೆಗೂ ಮುಂದುವರೆಯಲಿದೆ.  

Share this Video
  • FB
  • Linkdin
  • Whatsapp

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನ ಹೆಚ್ಚಿಸಿದ್ದು, ಹಲವು ಪ್ರಯತ್ನಗಳನ್ನ ನಡೆಸಿದ್ದಾರೆ. ಈ ಬಾರಿಯಾದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣತೊಟ್ಟಿರುವ ಬಿಜೆಪಿ ಹೈಕಮಾಂಡ್‌. ಈಗಾಗಲೇ ಹಲವು ದಿನಗಳಿಂದ ಬಿಜೆಪಿಯ ದೆಹಲಿ ನಾಯಕರು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್‌ ಆಗಲಿದೆ. ಈಗಾಗಲೇ ಜಾತಿವಾರು ಹಾಗೂ ಪ್ರಾದೇಶವಾರು ಕಣ್ಣೀಟ್ಟಿರುವ ಬಿಜೆಪಿ ಪ್ರಧಾನಿ ಮೋದಿ ಮೂಲಕ ಮತಯಾಚನೆ ಮಾಡುತ್ತಿದ್ದು, ನಾಳೆಗೂ ಮುಂದುವರೆಯಲಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರದಾನಿ ಮೋದಿ ಪ್ರಚಾರ ಮಾಡಲಿದ್ದು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯನ್ನೊಳಗೊಂಡ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹಾಗೇ ರಾಜಯಚೂರು ಜಿಲ್ಲೆಯ ಸಿಂಧನೂರಿನಲ್ಲಿಯೂ ಪ್ರಧಾನ ಮಂತ್ರಿ ಸಮಾವೇಶ ಕೈಗೊಳ್ಳಲಿದ್ದಾರೆ. 

Related Video