Party Rounds: ಬಿಜೆಪಿ ಟಿಕೆಟ್ ಲಿಸ್ಟ್ ನೋಡಿ ಪ್ರಧಾನಿ ಮೋದಿ ಹೇಳಿದ್ದೇನು?
ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಲಿಸ್ಟ್ ಫೈನಲ್ ಮಾಡಲು ಒದ್ದಾಡುತ್ತಿದೆ. ಕೊನೇ ಹಂತದಲ್ಲಿ ಟಿಕೆಟ್ ಲಿಸ್ಟ್‌ನಲ್ಲಿ ಬದಲಾವಣೆ ಮಾಡಲು ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕಾಮೆಂಟ್ಸ್ ಎನ್ನುವುದು ತಿಳಿದುಬಂದಿದೆ.
ಬೆಂಗಳೂರು (ಏ.10): ಎಲ್ಲಾ ಅಂದುಕೊಂಡತೆ ಆಗಿದ್ದರೆ, ಇಷ್ಟರಲ್ಲಾಗಲೇ ಬಿಜೆಪಿಯ ಮೊದಲ ಟಿಕೆಟ್ ಪಟ್ಟಿ ಬಿಡುಗಡೆ ಆಗಿರಬೇಕಿತ್ತು. ಆದರೆ ಬಿಜೆಪಿಯ ಅಭ್ಯರ್ಥಿಗಳ ಲಿಸ್ಟ್ ನೋಡಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಕಾಮೆಂಟ್ಸ್ ಕೊನೇ ಹಂತದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಮೊದಲ ಹಂತದಲ್ಲಿ ಒಂದಷ್ಟು ಅಭ್ಯರ್ಥಿಗಳ ಲಿಸ್ಟ್‌ಗಳನ್ನು ಮಾಡಿಕೊಂಡು, ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಇರಿಸಿದ್ದರು. ಅದರೊಂದಿಗೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹೇಳಿದಾಗ, 'ಬಸ್ ಇತ್ನಾ' ಎಂದು ಹೇಳಿದ್ದಾರಂತೆ. ಅಂದರೆ ಬದಲಾವಣೆ ಇಷ್ಟೇನಾ..? ಎಂದು ಮೋದಿ ಕೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
Party Rounds: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ!
ಪ್ರಧಾನಿ ಮೋದಿ ಬದಲಾವಣೆ ಇಷ್ಟೇನಾ ಎಂದು ಕೇಳಿದ್ದರಿಂದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮತ್ತಷ್ಟು ಬದಲಾವಣೆ ಹಾಗೂ ಹೊಸತನವನ್ನು ಸೇರಿಸಲು ಬಿಜೆಪಿ ಥಿಂಕ್ ಟ್ಯಾಂಕ್ ಮುಂದಾಗಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಬಹುದು ಎನ್ನಲಾಗಿದೆ.