ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾ... ಈ ವಿಡಿಯೋ ನೋಡಿ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದೇ , ಮೂರೂ ಪಕ್ಷಗಳು ಮತ್ತಷ್ಟು ಚುರುಕಾಗಿವೆ. ಚುನಾವಣೆ ಬಂದಾಗಲೆಲ್ಲಾ ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು ಹಾಗಾದ್ರೆ ಏನಿದು ನೀತಿ ಸಂಹಿತೆ..? ಇದರ ಹೆಸರು ತೆಗೆದ್ರೆ ಯಾಕೆ ನಾಯಕರು ಹೆದರುತ್ತಾರೆ..? ಈ ವಿಡಿಯೋ ನೋಡಿ
ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದೇ , ಮೂರೂ ಪಕ್ಷಗಳು ಮತ್ತಷ್ಟು ಚುರುಕಾಗಿವೆ. ಇಷ್ಟು ದಿನ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ ಅನ್ನೋ ಹಾಗೆ ರಾಜ್ಯದ ವಾತಾವರಣ ಬದಲಾಗಿದೆ. ಯಾಕಂದ್ರೆ, ಚುನಾವಣೆ ಘೋಷಣೆಯಾದ ಮರುಕ್ಷಣದಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಬಂದಾಗಲೆಲ್ಲಾ ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು. ಸರಳ ಭಾಷೆಯಲ್ಲಿ ಹೇಳುವುದಾದರೆ, ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳನ್ನು ನೀತಿ ಸಂಹಿತೆ ಎಂದು ಹೇಳಲಾಗುತ್ತದೆ. ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಹಾಗಾದ್ರೆ ಏನಿದು ನೀತಿ ಸಂಹಿತೆ..? ಇದರ ಹೆಸರು ತೆಗೆದ್ರೆ ಯಾಕೆ ನಾಯಕರು ಹೆದರುತ್ತಾರೆ..? ಈ ನೀತಿ ಸಂಹಿತೆ ಬರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಅನ್ವಯವವಾಗುತ್ತಾ..? ಚುನಾವಣೆ ಟೈಮಲ್ಲಿ ನಮ್ಮ ಪಾತ್ರವೇನು..? ಈ ಎಲ್ಲಾ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿದೆ ಉತ್ತರ