ಹಾಸನ JDS ಟಿಕೆಟ್ ಜಟಾಪಟಿ, ದೇವೇಗೌಡರ ಮಾತಿಗೆ ಬಗ್ಗದ ಭವಾನಿ ರೇವಣ್ಣ

ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.  ಆದರು ಹಾಸನ JDS ಟಿಕೆಟ್ ಗೊಂದಲ ಇನ್ನು ಬಗೆಹರಿದಿಲ್ಲ ದೇವೇಗೌಡರ ನಿವಾಸಕ್ಕೆ ರೇವಣ್ಣ ಕುಟುಂಬಸ್ಥರು ಭೇಟಿ ಬೀಡಿದ್ದು , ಹಾಸನ ಟಿಕೆಟ್‌ಗಾಗಿ ಪಟ್ಟು ಹಿಡಿದು ಭವಾನಿ ರೇವಣ್ಣ ಕುಳಿತಿದ್ದಾರೆ. 
 

First Published Apr 3, 2023, 10:25 AM IST | Last Updated Apr 3, 2023, 10:25 AM IST

ಹಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.  ಆದರು 
ಹಾಸನ JDS ಟಿಕೆಟ್ ಗೊಂದಲ ಇನ್ನು ಮುಂದುವರೆದಿದೆ. ದೇವೇಗೌಡರ ನಿವಾಸಕ್ಕೆ ರೇವಣ್ಣ ಕುಟುಂಬಸ್ಥರು ಭೇಟಿ ಬೀಡಿದ್ದು , ಹಾಸನ ಟಿಕೆಟ್‌ಗಾಗಿ ಪಟ್ಟು ಹಿಡಿದು ಭವಾನಿ ರೇವಣ್ಣ ಕುಳಿತಿದ್ದಾರೆ. ರೇವಣ್ಣ ಕುಟುಂಬವನ್ನು  ದೇವೇಗೌಡರು ಸಮಾಧಾನ ಮಾಡಲು ಪ್ರಯತ್ನಿಸಿದ್ದು,ತಡರಾತ್ರಿ 2 ಗಂಟೆಗಳ ಕಾಲ ಸಂಧಾನ ಸಭೆ  ನಡೆಸಿದ್ದಾರೆ. ಇನ್ನು ಭವಾನಿ ರೇವಣ್ಣ ಸಂಧಾನಕ್ಕೆ ಒಪ್ಪದೆ ಮುನಿಸಿನಿಂದಲೇ ಮನೆಯಿಂದ ಹೊರನಡೆದಿದ್ದು, ಭವಾನಿ ರೋಷಾವೇಶ ಕಂಡು ದೇವೇಗೌಡರು ಮೌನಕ್ಕೆ ಜಾರಿದ್ದಾರೆ.  ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ  ಎಚ್.ಡಿ ರೇವಣ್ಣ  ಮಾತನಾಡಿದ್ದು  ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡ್ರು ಹೇಳಿದ್ದು ಫೈನಲ್, ಕುಮಾರಸ್ವಾಮಿಯನ್ನು  ಮುಖ್ಯಮಂತ್ರಿ ಮಾಡುವುದು ಮಾತ್ರ ನಮ್ಮ ಉದ್ದೇಶ ವಾಗಿದೆ. ಕುಮಾರಸ್ವಾಮಿ ಮತ್ತು ನಾನು ಹೊಡೆದಾಡುತ್ತೇವೆ  ಅಂದ್ರೆ ಅದು ಭ್ರಮೆ ಕುಮಾರಸ್ವಾಮಿನ ಯಾವತ್ತು ಬಿಟ್ಟು ಕೊಡಲ್ಲ ಎಂದು JDS ವರಿಷ್ಠ ದೇವೇಗೌಡರ ಭೇಟಿ ಬಳಿಕ ಎಚ್.ಡಿ ರೇವಣ್ಣ ಹೇಳಿದ್ದಾರೆ.


 

Video Top Stories