ಸಿದ್ದು ಕೊನೆ ಎಲೆಕ್ಷನ್ ಅಸ್ತ್ರ..ಸೋಮಣ್ಣ ಅಭಿವೃದ್ಧಿ ಮಂತ್ರ..ಯಾರಿಗೆ ಸಿಗುತ್ತೆ ವರುಣಾದಲ್ಲಿ ಗೆಲುವು..!

ವರುಣಾ ವಿಧಾನಸಭಾ ಕ್ಷೇತ್ರ ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈವೋಲ್ಟೆಜ್‌ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ ಸೋಮಣ್ಣ ಅವರ ನಡುವಿನ ರಣರಂಗವಾಗಿದ್ದು, ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಶಪಥ ಮಾಡಿದರೆ, ಸಿದ್ದರಾಮಯ್ಯ ಸೊಮ್ಮಣ್ಣ  ಸೋಲಿಸಲು ಪಣ ತೊಟ್ಟಿದ್ದಾರೆ.

First Published May 1, 2023, 2:49 PM IST | Last Updated May 1, 2023, 2:49 PM IST

ವರುಣಾ ವಿಧಾನಸಭಾ ಕ್ಷೇತ್ರ ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈವೋಲ್ಟೆಜ್‌ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ ಸೋಮಣ್ಣ ಅವರ ನಡುವಿನ ರಣರಂಗವಾಗಿದ್ದು, ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಶಪಥ ಮಾಡಿದರೆ, ಸಿದ್ದರಾಮಯ್ಯ ಸೊಮ್ಮಣ್ಣ  ಸೋಲಿಸಲು ಪಣ ತೊಟ್ಟಿದ್ದಾರೆ..
 ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ವಿ.ಸೋಮಣ್ಣ ಕಣದಲ್ಲಿರುವ ವರುಣ, ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದೆ. ಒಬ್ಬರು 2ನೇ ಬಾರಿ ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಮತ್ತೊಬ್ಬರಿಗೆ ವರುಣದಲ್ಲಿ ಗೆದ್ದು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ  ಪ್ರಮುಖ ಗದ್ದುಗೆ ಸಿಗಬಹುದೆನ್ನುವ ಲೆಕ್ಕಾಚಾರ.ಈ ಬಾರಿಯ ವರುಣ ಕ್ಷೇತ್ರದ ಚುನಾವಣೆ ಒಂದು ರೀತಿಯಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ, 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪ ಚುನಾವಣೆಯನ್ನು ನೆನಪಿಸುತ್ತದೆ.. ಯಾಕಂದರೆ ಅಷ್ಟರ ಮಟ್ಟಿಗೆ ಜಿದ್ದಾಜಿದ್ದು ಏರ್ಪಟ್ಟಿದೆ ವರುಣಾ ಕ್ಷೇತ್ರದಲ್ಲಿ.  ಹಾಗಾದ್ರೆ ಹೈವೋಲ್ಟೇಜ್ ವರುಣದಲ್ಲಿ ಗೆಲುವು ಯಾರಿಗೆ..? ಗೆಲುವಿನ ಲೆಕ್ಕಾಚಾರ ಏನು..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ