ಸಿದ್ದು ವಿರುದ್ದ ಕಾಂಗ್ರೆಸ್‌ ಪಾಳೆಯದಲ್ಲಿ ಅಪಸ್ವರ,2 ಕ್ಷೇತ್ರಗಳ ಟಿಕೆಟ್ ಗೆ ಪರಂ ಪಟ್ಟು

 ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿದ್ದರಾಮಯ್ಯ ಕೋಲಾರದಿಂದಲು  ಸ್ಪರ್ಧೆ ಮಾಡುವ ವಿಚಾರದಲ್ಲಿದ್ದಾರೆ. ಸಿದ್ದರಾಮಯ್ಯರ ಇದೇ ನಡೆಗೆ ಕಾಂಗ್ರೆಸ್ ನ ಇತರೆ ನಾಯಕರು ವಿರೋಧ ವ್ಯಕ್ತಪಡಿಸಿದ್ದು,  ಡಾ.ಜಿ ಪರಮೇಶ್ವರ್ ಕೂಡ ನನಗೂ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

First Published Apr 4, 2023, 3:21 PM IST | Last Updated Apr 4, 2023, 3:21 PM IST

ಕಾಂಗ್ರೆಸ್ ಪಕ್ಷ ಈಗಾಗಲೇ  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದ್ದು,  124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ಬಾಕಿ  100 ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಉಳಿದಿದೆ.  ಇನ್ನು ಈಗಾಗಲೇ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿದ್ದರಾಮಯ್ಯ ಕೋಲಾರದಿಂದಲು  ಸ್ಪರ್ಧೆ ಮಾಡುವ ವಿಚಾರದಲ್ಲಿದ್ದಾರೆ. ಸಿದ್ದರಾಮಯ್ಯರ ಇದೇ ನಡೆಗೆ ಕಾಂಗ್ರೆಸ್ ನ ಇತರೆ ನಾಯಕರು ವಿರೋಧ ವ್ಯಕ್ತಪಡಿಸಿದ್ದು,  ಡಾ.ಜಿ ಪರಮೇಶ್ವರ್ ಕೂಡ ನನಗೂ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದ ಟಿಕೆಟ್ ಕೂಡ ನೀಡುವಂತೆ ಒತ್ತಾಯಿಸಿದ್ದು, ಕೊರಟಗೆರೆಯಲ್ಲಿ ಸೋತಿದ್ದಕ್ಕೆ ಸಿಎಂ ಸ್ಥಾನ ಹೋಯ್ತು. ಹೀಗಾಗಿ ನಾನೂ ಸಿಎಂ ಕುರ್ಚಿ ಆಕಾಂಕ್ಷಿಯಾಗಿದ್ದು, ಸಿದ್ದರಾಮಯ್ಯರಂತೆ 2 ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಪರಂ ಎನ್ನಲಾಗಿದೆ.

Video Top Stories