ಕಾಂಗ್ರೆಸ್ ಗೆಲ್ಲಿಸಲು ಸೇನೆ ಸಿದ್ಧ.. ರಣಕಣಕ್ಕೆ ಕೈ ಸೇನಾನಿಗಳು ರೆಡಿ!

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆ ಕೈ  2ನೇ ಪಟ್ಟಿ ರಿಲೀಸ್ ಮಾಡಿದ್ದು, ಕಾಂಗ್ರೆಸ್ ಒಳಗೆ  ಬಂಡಾಯದ ಬೇಗುದಿ ಉಂಟಾಗಿದೆ. 

First Published Apr 8, 2023, 2:28 PM IST | Last Updated Apr 8, 2023, 2:28 PM IST

ಕಾಂಗ್ರೆಸ್ ಪಕ್ಷ ಚುನಾವಣೆಗೆ ಸರ್ವಥಾ ಸನ್ನದ್ಧವಾಗಿದೆ.  ಅಳೆದೂ ತೂಗಿ, ಹತ್ತಕ್ಕೆ ನೂರು ಸಲ ಯೋಚನೆ ಮಾಡಿ ಸೇನಾಪಡೆಯನ್ನ ಸಿದ್ಧಗೊಳಿಸಿದೆ. ಎಲ್ಲಾ ಲೆಕ್ಕಾಚಾರದ ಬಳಿಕ, ಒಟ್ಟು 166 ಮಂದಿ ಅಭ್ಯರ್ಥಿಗಳ ಪಟ್ಟಿಗಳನ್ನ ಬಿಡುಗಡೆ ಮಾಡಿದೆ. ಆದರೆ 2ನೇ ಪಟ್ಟಿ ರಿಲೀಸ್ ಮಾಡಿ ನಿಟ್ಟುಸಿರು ಬಿಟ್ಟು ರಿಲ್ಯಾಕ್ಸ್ ಆಗುವ ಮೊದಲೇ, ಟೆನ್ಷನ್ ಮೇಲೆ ಟೆನ್ಷನ್ ಕಾಡೋಕೆ ಶುರುವಾಗಿದೆ.  ಮೊದಲಿಗೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಈಗ 42 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿದೆ. ಅನೌನ್ಸ್ ಆದ ಮರುಕ್ಷಣದಿಂದಲೇ ಕಾಂಗ್ರೆಸ್ ಒಳಗೆ ಬಂಡಾಯದ ಬೇಗುದಿ ಉಂಟಾಗಿದೆ. ಹಾಗಾದರೆ ಟಿಕೆಟ್ ಕೊಡಿಸೋದ್ರಲ್ಲಿ ಮೇಲುಗೈ ಸಾಧಿಸಿದ್ದು ಮಾಜಿ ಸಿಎಮ್ ಸಿದ್ದರಾಮಯ್ಯನಾ..? ಡಿಕೆ ಶಿವಕುಮಾರ್ ನಾ ? ಈ ವಿಡಿಯೋ ನೋಡಿ 
 

Video Top Stories