ಭಜರಂಗಿ ಬ್ಯಾನ್.. ಲಿಂಗಾಯತ ಸಿ ಎಂ ಕಾಂಗ್ರೆಸ್ ಎಡವಟ್ಟು , ಡ್ಯಾಮೇಜ್ ಕಂಟ್ರೋಲ್‌ಗೆ ಕೈ ಪಾಳಯದಲ್ಲಿದೆಯಾ ಬ್ರಹ್ಮಾಸ್ತ್ರ.?
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಏನಿದೆ, ಏನಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲವಾಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಜರಂಗದಳವನ್ನ ಬ್ಯಾನ್ ಮಾಡುತ್ತೆ ಎನ್ನುವ ಮಾತು ಮಾತ್ರ, ದೊಡ್ಡದಾಗೆ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಏನಿದೆ, ಏನಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲವಾಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಜರಂಗದಳವನ್ನ ಬ್ಯಾನ್ ಮಾಡುತ್ತೆ ಎನ್ನುವ ಮಾತು ಮಾತ್ರ, ದೊಡ್ಡದಾಗೆ ಸದ್ದು ಮಾಡುತ್ತಿದೆ. ಹಲವಾರು ಕಡೆ ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದ ನಾನಾ ಊರುಗಳಲ್ಲಿ, ಹನುಮಂತನ ಮಂದಿರಗಳಲ್ಲಿ ಬಜರಂಗದಳದವರು, ಹಿಂದೂ ಪರ ಸಂಘಟನೆಗಳು ಹನುಮಾನ್ ಚಾಲೀಸ ಪಠಣ ಮಾಡುವ ಮೂಲಕ, ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಕೈಗೆ ಕಾಂಗ್ರೆಸ್ ತಾನೇ ತಾನಾಗಿ ದೊಡ್ಡದೊಂದು ಆಯುಧ ಕೊಟ್ಟಂತಿತ್ತು ಪರಿಸ್ಥಿತಿ. ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ, ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು, ಬಿಜೆಪಿ ಕೈಗೆ ಸಿಕ್ಕಿರುವ ಪ್ರಬಲ ಅಸ್ತ್ರ.. ಮೊದಲೇ ಕಾಂಗ್ರೆಸ್ ಪಕ್ಷ ಹಿಂದೂ ಭಾವನೆಗಳಿಗೆ ಬೆಲೆ ಕೊಡಲ್ಲ ಎನ್ನುವ ಆರೋಪ ಮಾಡುತ್ತಿರುವ ಬಿಜೆಪಿ, ಈಗ ಅದೇ ಮಾತನ್ನ ಘಂಟಾಘೋಷವಾಗಿ ಹೇಳುತ್ತಿದೆ ಇದೆ. ಇನ್ನೊಂದೆಡೆ, ಬಜರಂಗದಳವನ್ನೂ, ಪಿಎಫ್ಐನೂ ಒಂದೇ ತಕ್ಕಡಿಗೆ ಹಾಕಿರೋ ಕಾಂಗ್ರೆಸ್ ವಿರುದ್ಧ ಅಸಮಾಧಾನವೂ ಶುರುವಾಗಿದೆ.. ಇದರಿಂದ ಪಕ್ಷಕ್ಕೆ ಎಂಥಾ ಡ್ಯಾಮೇಜ್ ಆಗಲಿದೆ ಅನ್ನೋದು ನಿಧಾನಕ್ಕೆ ಕಾಂಗ್ರೆಸ್‌ಗೆ ಅರ್ಥವಾದ ಹಾಗೆ ಕಾಣುತ್ತಿದೆ.. ಹಾಗಾಗಿನೇ, ನಾನೂ ಹಿಂದೂ, ನಮ್ಮವರೂ ಹಿಂದೂ, ನಾವೂ ಹಿಂದೂಗಳ ಪರ ಅನ್ನೋ ಹಾಗೆ ಕಾಂಗ್ರೆಸ್ ನಾಯಕರು ಮಾತಾಡ್ತಾ ಇದಾರೆ..