ಕೈ ನಾಯಕರ ವಿರುದ್ಧ ಸಿಎಂ ಗುಡುಗು..ಶಿಗ್ಗಾಂವಿ ಅಖಾಡಕ್ಕೆ ಬರಲು ಕಾಂಗ್ರೆಸ್‌ಗೆ ಬೊಮ್ಮಾಯಿ ಆಹ್ವಾನ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆ ಬಜೆಪಿಯಲ್ಲಿ ಒಂದು ಕಡೆ  ಸಿಎಂ ಬೊಮ್ಮಾಯಿ  ಮತ್ತೊಂದು ಕಡೆ ಮಾಜಿ ಸಿಎಂ ಪುತ್ರ ವಿಜಯೇಂದ್ರ. ಇನ್ನು ಕಾಂಗ್ರೆಸ್‌ನತ್ತ ನೋಡುವುದಾರೆ  ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಇವರಿಗೆ ಇನ್ನೂ ಪ್ರಬಲ ಪೈಪೋಟಿ ನೀಡುವ ಪ್ರತಿಸ್ಪರ್ಧಿ ಕಾಣ್ತಿಲ್ಲ.

First Published Apr 9, 2023, 10:56 AM IST | Last Updated Apr 9, 2023, 10:56 AM IST

ಶಿಗ್ಗಾಂವಿಯಲ್ಲಿ ಮೂರೂ ಸಲ ಬಿಜೆಪಿಯಿಂದಲೇ ಗೆದ್ದಿರೋ ಬೊಮ್ಮಾಯಿ ಈಗ ಮತ್ತೊಮ್ಮೆ ಗೆದ್ದರೆ, ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ಸಂಪಾದಿಸಿದರೆ ಮತ್ತೊಮ್ಮೆ ಸಿಎಂ  ಬೊಮ್ಮಾಯಿನೆ ಆಗುತ್ತಾರೆ. ಇನ್ನು ಇಂತಹ ಕ್ಷೇತ್ರದಲ್ಲಿ ಬೊಮ್ಮಾಯಿಗೆ ಎದುರಾಳಿಗಳು ಇಲ್ಲವೇ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇ ವರುಣಾ ಕ್ಷೇತ್ರ ಸಿದ್ದರಾಮಯ್ಯಗಾಗಿ ಮಗ ಯತೀಂದ್ರ ತ್ಯಾಗ ಮಾಡಿರುವ ಕ್ಷೇತ್ರ .ಮಗನಿಗಾಗಿ ಸಿದ್ದರಾಮಯ್ಯ ಕಳೆದ ಬಾರಿ  ವರುಣಾ ಕ್ಷೇತ್ರವನ್ನ ತ್ಯಾಗ ಮಾಡಿ,ಚಾಮುಂಡೇಶ್ವರಿಗೆ ಹೋಗಿ  ಸೋತಿದ್ದಾರೆ.  ಇನ್ನು ಜೆಡಿಎಸ್ ಕಥೆ ನೋಡುವುದಾದರೆ ವರುಣಾದಲ್ಲಿ  ಅಭಿಷೇಕ್ ಎನ್ನುವ ಅಭ್ಯರ್ಥಿ ಘೋಷಣೆ ಮಾಡಿದೆ. ಆದರೆ, ಅಭಿಷೇಕ್ ಜೆಡಿಎಸ್ ಕಾರ್ಯಕರ್ತರ ಕೈ ಗೆ ಸಿಗುತ್ತಿಲ್ಲ ಎಂಬ ದೂರು ಕೇಳಿ ಬರ್ತಿದೆ.ಅಭ್ಯರ್ಥಿ ಘೋಷಣೆಯಾಗಿ ತಿಂಗಳಾದರು ಅಭಿಷೇಕ್ ಪ್ರಚಾರಕ್ಕೆ ಬರುತ್ತಿಲ್ಲ. ಆದರೆ ಇಡೀ ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯ ತಂದೆಯ ಪರವಾಗಿ ಟೊಂಕಕಟ್ಟಿ ನಿಂತಿದ್ದಾರೆ. 
 

Video Top Stories