Asianet Suvarna News Asianet Suvarna News

ಜೆಡಿ​ಎಸ್‌ ಮಿಷನ್‌-123: ಚುನಾವಣೆಗೂ ವರ್ಷದ ಮೊದಲೇ ಅಭ್ಯರ್ಥಿ ಘೋಷಣೆ

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು  ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಲ್ಲಿ ನಾಲ್ಕು ದಿನ​ಗಳ ಕಾಲ ಜೆಡಿ​ಎಸ್‌ ಮಿಷನ್‌-123 ಕಾರ್ಯಾ​ಗಾ​ರ ಆಯೋಜಿಸಲಾಗಿದೆ. 

ಬೆಂಗಳೂರು (ಸೆ. 27): ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು  ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಲ್ಲಿ ನಾಲ್ಕು ದಿನ​ಗಳ ಕಾಲ ಜೆಡಿ​ಎಸ್‌ ಮಿಷನ್‌-123 ಕಾರ್ಯಾ​ಗಾ​ರ ಆಯೋಜಿಸಲಾಗಿದೆ. 

ಹೈಕಮಾಂಡ್‌ನಿಂದ ದಲಿತ ಕಾರ್ಡ್, ತಣ್ಣಗಾಯ್ತಾ ಸಿದ್ದು-ಡಿಕೆಶಿ ನಡುವಿನ ಜಿದ್ದಾಜಿದ್ದಿ.?

ಈ ಕಾರ್ಯಾ​ಗಾ​ರ​ದಲ್ಲಿ 2023ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸ​ಲಿ​ರುವ 123 ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಹೆಸರು ಘೋಷ​ಣೆ ಮಾಡ​ಲಾ​ಗು​ವುದು. ಹಾಲಿ ಮತ್ತು ಮಾಜಿ ಶಾಸ​ಕರು, ಕಳೆದ ಬಾರಿ ಚುನಾ​ವ​ಣೆ​ಯಲ್ಲಿ ಸೋತ ಅಭ್ಯ​ರ್ಥಿ​ಗಳು ಹಾಗೂ ಮುಂದಿನ ಚುನಾ​ವ​ಣೆ​ಯ ಆಕಾಂಕ್ಷಿಗಳು ಕಾರ್ಯಾ​ಗಾ​ರ​ದಲ್ಲಿ ಪಾಲ್ಗೊ​ಳ್ಳು​ವರು. ವಿವಿಧ ಕ್ಷೇತ್ರ​ಗಳ 123 ಅಭ್ಯ​ರ್ಥಿ​ಗಳ ಹೆಸರು ಘೋಷಣೆ ಮಾಡಿ ಅವ​ರಿ​ಗೆಲ್ಲ ಗ್ರೀನ್‌ ಕಾರ್ಡ್‌ ವಿತರಣೆ ಮಾಡಲಾಗು​ವುದು ಎಂದು ಎಚ್‌ಡಿಕೆ ಹೇಳಿದ್ದಾರೆ.

ಜೆಡಿ​ಎಸ್‌ ವರಿಷ್ಠ ಎಚ್‌.ಡಿ.ದೇವೇ​ಗೌ​ಡ, ಹಿರಿಯ ನಾಯಕ ವೈ.ಎಸ್‌ .ವಿ.​ದ​ತ್ತಾ, ಸಂಸದ ಪ್ರಜ್ವಲ್‌ ರೇವಣ್ಣ , ಯುವ ನಾಯಕ ನಿಖಿಲ್‌ ಕುಮಾ​ರಸ್ವಾಮಿ ಹಾಗೂ ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಕಾರಾರ‍ಯಗಾರದಲ್ಲಿ ಭಾಗಿಯಾಗಲಿದ್ದಾರೆ.