Jan Ki Baat Suvarna News Survey: ಮಾರ್ಚ್ 15 ರಿಂದ ಏಪ್ರಿಲ್ ರವರೆಗೆ ನಡೆಸಲಾದ ಸಮೀಕ್ಷೆ !
ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ನೇರ, ದಿಟ್ಟ, ನಿರಂತರ ಸುದ್ದಿ ಪ್ರಸಾರ ಮಾಡುವ ಸುವರ್ಣ ನ್ಯೂಸ್ ವತಿಯಿಂದ ಮಾರ್ಚ್-15 ರಿಂದ ಏಪ್ರಿಲ್ 11ರವರೆಗೆ ಸಮೀಕ್ಷೆ ನಡೆಸಲಾಗಿದೆ.
ಬೆಂಗಳೂರು (ಏ.14): ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ನೇರ, ದಿಟ್ಟ, ನಿರಂತರ ಸುದ್ದಿ ಪ್ರಸಾರ ಮಾಡುವ ಸುವರ್ಣ ನ್ಯೂಸ್ ವತಿಯಿಂದ ಮಾರ್ಚ್-15 ರಿಂದ ಏಪ್ರಿಲ್ 11ರವರೆಗೆ ಸಮೀಕ್ಷೆ ನಡೆಸಲಾಗಿದೆ.
ರಾಷ್ಟ್ರೀಯ ವಾಹಿನಿಗಳು ನಡೆಸುವ ಸಮೀಕ್ಷೆಗಿಂತಲೂ ಸುವರ್ಣ ನ್ಯೂಸ್ ಸಮೀಕ್ಷೆ ಬಗ್ಗೆ ರಾಜ್ಯದ ಜನತೆಗೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಶೇ.92ರಷ್ಟು ಭವಿಷ್ಯ ನುಡಿದ ಮಾಧ್ಯಮ ಸಂಸ್ಥೆ ನಮ್ಮದು. ಇದೀಗ ಈ ಬಾರಿ ಕರ್ನಾಟಕ ಚುನಾವಣೆಯ ಮೊದಲ ಹಂತದ ಚುನಾವಣೋತ್ತರ ಸಮೀಕ್ಷೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. 20 ಸಾವಿರಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲ 224 ಕ್ಷೇತ್ರಗಳ ಮತದಾರರ ನಾಡಿ ಮಿಡಿತವನ್ನು ಇಲ್ಲಿ ಹಿಡಿದಿಟ್ಟು, ನಿಮ್ಮ ಮುಂದೆ ಇಡಲಾಗುತ್ತಿದೆ. ಮಾರ್ಚ್-15 ರಿಂದ ಏಪ್ರಿಲ್ 11ರವರೆಗೆ ಸಮೀಕ್ಷೆ ನಡೆಸಲಾಗಿದೆ. ಜನ್ ಕಿ ಬಾತ್ ಸುವರ್ಣ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂಬುದನ್ನು ವರದಿ ಸಿದ್ಧಪಡಿಸಲಾಗಿದೆ.