ಕಾಂಗ್ರೆಸ್‌ ಸೇರಿದ 2 ವಾರದಲ್ಲಿ ಚೌಹಾಣ್‌ ಅಕ್ರಮ ಆಸ್ತಿಗಳಿಸಿದ್ರಾ? : ಪ್ರಿಯಾಂಕ್ ಖರ್ಗೆ ಪ್ರಶ್ನೆ

ಪ್ರಿಯಾಂಕ್‌ ಖರ್ಗೆ ಆಪ್ತನ ಮನೆ ಮೇಲೆ ಐಟಿ ದಾಳಿ
ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ 
ಸೋಲುವ ಭೀತಿಯಿಂದ ಬಿಜೆಪಿಯಿಂದ ಐಟಿ ದಾಳಿ

First Published May 7, 2023, 5:36 PM IST | Last Updated May 7, 2023, 5:36 PM IST

ಪ್ರಿಯಾಂಕ್‌ ಖರ್ಗೆ ಆಪ್ತ ಅರವಿಂದ್‌ ಚೌಹಾಣ್‌ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ಹೀಗಾಗಿ ಬಿಜೆಪಿ ವಿರುದ್ಧ ಪ್ರಿಯಾಂಕ್‌ ಖರ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ. ಸೋಲುವ ಭೀತಿಯಲ್ಲಿ ಬಿಜೆಪಿಯವರು ಐಟಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿ ಸೇರಿದ್ರೆ ಕ್ಲೀನ್‌ ಚಿಟ್‌ ಕೊಡ್ತೀರಾ. ಅದೇ ಬಿಜೆಪಿಯವರು ಕಾಂಗ್ರೆಸ್ ಸೇರಿದ್ರೆ, ಐಟಿ ರೇಡ್‌ ಮಾಡಿಸುತ್ತೀರಾ ಎಂದು ಪ್ರಿಯಾಂಕ್‌ ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನೀವು ಈ ರೀತಿ ಹೆದರಿಸಿ, ಬೆದರಿಸಿದ್ರೆ ನಾವು ಹೆದರೋದಿಲ್ಲ. ಎರಡು ವಾರದಲ್ಲಿ ಚೌಹಾಣ್‌ ಅಕ್ರಮ ಆಸ್ತಿಗಳಿಸಿದ್ರಾ ? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನವಕರ್ನಾಟಕದ ಕಡೆ ಮೋದಿ ದೃಷ್ಟಿ, ಈ ಬಾರಿ ಬಿಜೆಪಿ ಗೆಲುವು ಖಚಿತ: ರಾಜೀವ್ ಚಂದ್ರಶೇಖರ್

Video Top Stories