ಮಾಲೂರಲ್ಲಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ಗಲಾಟೆ, ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ ಕಾರಿಗೆ ಮುತ್ತಿಗೆ!

ಕೋಲಾರದ ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ.   

First Published Apr 17, 2023, 6:08 PM IST | Last Updated Apr 17, 2023, 6:08 PM IST

ಕೋಲಾರ (ಏ.17): ಕೋಲಾರದ ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ.  ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ ಅವರಿದ್ದ ಕಾರಿಗೆ ಕಾಂಗ್ರೆಸಿಗರು ಅಡ್ಡ ಬಂದ ಹಿನ್ನೆಲೆ ಮಾಲೂರು ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಈ ಘಟನೆ ನಡೆದಿದೆ.  ಕಾಂಗ್ರೆಸ್ ನ ಕೆವೈ.ನಂಜೇಗೌಡ ನಾಮಪತ್ರ ಸಲ್ಲಿಕೆಗಾಗಿ ತಹಶಿಲ್ದಾರರ ಕಚೇರಿಗೆ ಬಂದಿದ್ದರು. ಅವರ ಜೊತೆ ಬಂದಿದ್ದ ಬೆಂಬಲಿಗರಿಂದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಅಡ್ಡ ಬಂದಿದ್ದರು. ಈ ವೇಳೆ  ಕಾಂಗ್ರೆಸ್ಸಿಗರ ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿಬಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿದ ನಂತರ ಘರ್ಷಣೆ ತಪ್ಪಿದೆ.

Video Top Stories