Party Rounds: ವಿಪಕ್ಷ ನಾಯಕನಿಲ್ಲದೇ ಅಧಿವೇಶನ, ಬಿಜೆಪಿಯಲ್ಲಿ ಮುಜುಗುರ!
ಅಧಿವೇಶನ ಮೂರನೇ ದಿನವೂ ನಡೆದರೂ ಇನ್ನೂ ವಿಪಕ್ಷ ನಾಯಕ ಯಾರು ಅಂತ ಫೈನಲ್ ಆಗಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಇದು ಮೊಟ್ಟ ಮೊದಲನೇ ಸಲವಾಗಿದೆ. ಕಾಂಗ್ರೆಸ್ನವರು ಮಾತು ಮಾತಿಗೆ ಟಾಂಟ್ ಮಾಡೋದಕ್ಕೆ ಶುರುಮಾಡಿದ್ದಾರೆ.
ಬೆಂಗಳೂರು(ಜು.05): ವಿಪಕ್ಷ ನಾಯಕ ಯಾರು? ಎಂಬ ಪ್ರಶ್ನೆ ಇನ್ನೂ ಮುಂದುವರೆದಿದೆ. ಇದರಿಂದ ಬಿಜೆಪಿಯವರಿಗೂ ಮುಜುಗರ ಆಗುತ್ತಿದೆ. ಅಧಿವೇಶನ ಮೂರನೇ ದಿನವೂ ನಡೆದರೂ ಇನ್ನೂ ವಿಪಕ್ಷ ನಾಯಕ ಯಾರು ಅಂತ ಫೈನಲ್ ಆಗಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಇದು ಮೊಟ್ಟ ಮೊದಲನೇ ಸಲವಾಗಿದೆ. ಕಾಂಗ್ರೆಸ್ನವರು ಮಾತು ಮಾತಿಗೆ ಟಾಂಟ್ ಮಾಡೋದಕ್ಕೆ ಶುರುಮಾಡಿದ್ದಾರೆ. ಅಧಿವೇಶನದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ರೆ ಅದಕ್ಕೆ ಇನ್ನೂ ವಿಪಕ್ಷ ನಾಯಕರೇ ಇಲ್ಲ ಸುಮ್ನೆ ಕುತ್ಕೊಳ್ಳಿ ಅಂತ ಕಾಂಗ್ರೆಸ್ನವರು ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ನಾಯಕರಿಗೆ ತೀವ್ರ ಮುಜುಗುರವಾಗುತ್ತಿದೆ.