ನಿಖಿಲ್‌ ಕುಮಾರಸ್ವಾಮಿಗೆ ಕರೆ ಮಾಡಿದ ಡಿಕೆಶಿ: ಸೋಲಿನಿಂದ ಕಂಗೆಡಬೇಡ ಎಂದು ಸಲಹೆ

ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋಲು ಕಂಡ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸಾಂತ್ವಾನ ಹೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. 

First Published May 16, 2023, 12:32 PM IST | Last Updated May 16, 2023, 1:06 PM IST

ಬೆಂಗಳೂರು(ಮೇ.16):  ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋಲು ಕಂಡ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಾಂತ್ವಾನ ಹೇಳಿದ್ದಾರೆ. ನಿಖಿಲ್‌ಗೆ ಕರೆ ಮಾಡಿ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ನೀನು ಎರಡು ಬಾರಿ ಸೋತಿದ್ದಿಯಾ, ನಿನಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದೆ, ಆದರೆ, ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಇಷ್ಟು ಮಟ್ಟಕ್ಕೆ ಬೆಳದಿದ್ದೇನೆ, ಈ ಸೋಲಿನಿಂದ ಕಂಗೆಡಬೇಡ, ಕ್ಷೇತ್ರದಲ್ಲಿ ಓಡಾಟ ನಡೆಸಿ ಜನರ ಜತೆ ಬೆರೆಯಬೇಕು, ಸೋಲಿನಿಂದ ಹತಾಶನಾಗಬೇಡ, ರಾಜಕೀಯದಲ್ಲಿ ಏಳು, ಬೀಳು ಸಹಜವಾಗಿರುತ್ತೆ, ಮುಂದಿನ ದಿನಗಳಲ್ಲಿ ನಿನಗೆ ರಾಜಕೀಯ ಉತ್ತಮ ಭವಿಷ್ಯವಿದೆ ಡಿಕೆಶಿ ಹಾರೈಸಿದ್ದಾರೆ. 

ಚುನಾವಣೆಗೂ ಮುಂಚೆ ಒಗ್ಗಟ್ಟು.. ಈಗ ಪಟ್ಟಕ್ಕಾಗಿ ಬಿಕ್ಕಟ್ಟು : ಯಾರಿಗೆ ಪಟ್ಟಾಭಿಷೇಕ ?

Video Top Stories