ವಿಧಾನಪರಿಷತ್ ನಾಮಪತ್ರ ಪ್ರಕ್ರಿಯೆ: ನಿಷ್ಠಾವಂತ ಕಾರ್ಯಕರ್ತರಿಗೆ ಸದಸ್ಯ ಸ್ಥಾನ ನೀಡಲು ಪಟ್ಟು !

ವಿಧಾನಪರಿಷತ್‌ಗೆ ನಿಷ್ಠಾವಂತ ಕಾರ್ಯಕರ್ತರಿಗೆ ಸದಸ್ಯ ಸ್ಥಾನ ನೀಡುವಂತೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

First Published Aug 7, 2023, 11:26 AM IST | Last Updated Aug 7, 2023, 11:26 AM IST

ವಿಧಾನಪರಿಷತ್ ನಾಮಕರಣದ ಪ್ರಕ್ರಿಯೆ ಕ್ಲೈಮ್ಯಾಕ್ಸ್ ಹಂತ  ತಲುಪಿದ್ದು, ಇದೇ ಹೊತ್ತಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಿಷ್ಠಾವಂತರಿಗೆ ಅವಕಾಶ ಸಿಗುತ್ತಿಲ್ಲ ಎಂದು ಶಾಸಕರು(MLAs) ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ಯಕರ್ತರಲ್ಲೂ ಅಸಮಾಧಾನದ ಬೇಗುದಿ ಭುಗಿಲೆದ್ದಿದೆ. ಎಂ.ಆರ್ ಸೀತಾರಾಮ್, ಉಮಾಶ್ರೀ ಹಾಗೂ ಸುಧಾಮ್ ದಾಸ್‌ಗೆ ವಿಧಾನಪರಿಷತ್(Vidhana Parishad) ಸದಸ್ಯ ಸ್ಥಾನ ಕೊಡೋದಕ್ಕೆ ವಿರೋಧ ವ್ಯಕ್ತವಾಗಿದೆ. ಪಕ್ಷದ ನಾಯಕರ ನಿಲುವಿನ ವಿರುದ್ಧ ಇಂದು ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕೆಪಿಸಿಸಿ ಕಚೇರಿ(KPCC office) ಬಳಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದ್ದು, ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಸಭೆಗೆ ಆಹ್ವಾನಿಸಲಾಗಿದೆ. ಪಕ್ಷಕ್ಕೆ ಹೊಸದಾಗಿ ಬಂದವರಿಗೆ ಅವಕಾಶ ನೀಡಬಾರದು. ನಿಷ್ಠಾವಂತ ಕಾರ್ಯಕರ್ತರಿಗೇ ಅಧಿಕಾರ ಸಿಗುವಂತಾಗಬೇಕು. ಕಾರ್ಯಕರ್ತರೇ ಪಕ್ಷದ ಆಸ್ತಿ ಎಂಬ ಘೋಷಣೆ ಜಾರಿಯಾಗಬೇಕು ಎಂದು ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ಬೆಲೆ ಏರಿಕೆ ಗಾಯಕ್ಕೆ ಉಪ್ಪು ಸುರಿದ ಸರ್ಕಾರ: ವಾಹನಗಳ ತೆರಿಗೆ ಏರಿಸಿ ಸರ್ಕಾರದ ಆದೇಶ