Party Rounds ಸಿದ್ದು ಕೋಲಾರ ಕನಸಿಗೆ ಹೈಕಮಾಂಡ್ ಬ್ರೇಕ್, ಒಂದೇ ಕ್ಷೇತ್ರ ಸಾಕು ಅನ್ನೋ ಚರ್ಚೆ!
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರಾ? ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಿದ್ದರಾಮಯ್ಯ 2 ಕ್ಷೇತ್ರದ ಸ್ಪರ್ಧೆ ವಿಚಾರ ಚರ್ಚೆ ಮಾಡಲಾಗಿದೆ. ಈ ಕುರಿತು ರೋಚಕ ಮಾಹಿತಿ ಇಲ್ಲಿದೆ.
ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ರೆಡಿಯಾಗಿದ್ದಾರೆ. ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯಗೆ ಟಿಕೆಟ್ ನೀಡಿದೆ.ಆದರೆ ಇಂದು ದೆಹಲಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ ವಿಚಾರ ಹೈಕಮಾಂಡ್‌ಗೆ ತೃಪ್ತಿಯಾಗಿಲ್ಲ. ವರುಣ ಸುಕ್ಷಿತವಾಗಿರುವ ಕಾರಣ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ, ಎರಡು ಕ್ಷೇತ್ರದಿಂದ ಟಿಕೆಟ್ ಕೇಳಿದರೆ, ಇತರ ನಾಯಕರು ಇದೇ ಮಾರ್ಗ ಅನುಸರಿಸುತ್ತಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.