News Hour: ಗ್ಯಾರಂಟಿ ವಿಚಾರದಲ್ಲಿಯೇ ಸರ್ಕಾರಕ್ಕೆ ನೋ ಗ್ಯಾರಂಟಿ!
ಮೊದಲ ಕ್ಯಾಬಿನೆಟ್‌ನಲ್ಲಿಯೇ ಪಂಚ ಗ್ಯಾರಂಟಿಯನ್ನು ಸರ್ಕಾರ ಘೋಷಣೆ ಮಾಡಿದೆ. ಎಲ್ಲಕ್ಕೂ ಸದ್ಯ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್ ಸಭೆಯ ಬಳಿಕ ಈ ಗ್ಯಾರಂಟಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಮೇ.20):ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ವಿಚಾರದಲ್ಲಿ ಈವರೆಗೂ ಗ್ಯಾರಂಟಿಯಾಗಿ ಏನನ್ನೂ ಹೇಳಿಲ್ಲ. ಇದರ ಬೆನ್ನಲ್ಲಿಯೇ ಸಿದ್ಧರಾಮಯ್ಯ ಸರ್ಕಾರದ ನಡೆಯ ಬಗ್ಗೆ ಕುತೂಹಲ ಕೂಡ ಹೆಚ್ಚಾಗಿದೆ. ಇನ್ನೊಂದೆಡೆ ಡಿಕೆ ಶಿವಕುಮಾರ್, ಬೀದೀಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕೆ ಆಗಲ್ಲ ಎಂದು ಹೇಳಿದ್ದಾರೆ.
ಚುನಾವಣೆಯ ವೇಳೆ ಎಲ್ಲರಿಗೂ ಫ್ರೀ.. ಫ್ರೀ ಎಂದಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಮೇಲೆ ತನ್ನ ಗ್ಯಾರಂಟಿಗೆ ಷರತ್ತು ವಿಧಿಸುವ ಲೆಕ್ಕಾಚಾರದಲ್ಲಿದೆ. ಯಾವುದೇ ಷರತ್ತು ವಿಧಿಸದೇ ಐದೂ ಗ್ಯಾರಂಟಿ ಜಾರಿ ಮಾಡುವುದಾದರೆ, ವಾರ್ಷಿಕ 70 ಸಾವಿರ ಕೋಟಿ ರೂಪಾಯಿ ಬೇಕಾಗಲಿದ್ದರೆ, ಷರತ್ತು ವಿಧಿಸಿ ಜಾರಿ ಮಾಡುವುದಾದರೆ, 50 ಸಾವಿರ ಕೋಟಿ ಬೇಕಾಗುತ್ತದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ..' ಗ್ಯಾರಂಟಿ ಬಗ್ಗೆ ಡಿಕೆಶಿ ಕೊಂಕು!
ಇಂದು 2ನೇ ಬಾರಿಗೆ ಸಿಎಂ ಆದ ಸಿದ್ಧರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಮೊದಲ ಬಾರಿಗೆ ಡಿಸಿಎಂ ಪದವಿಗೆ ಏರಿದ ಡಿಕೆ ಶಿವಕುಮಾರ್ ತಮ್ಮ ಗಂಗಾಧರ ಅಜ್ಜನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಪ್ರಮಾಣವಚನ ಬೋಧಿಸಿದರು.