ಎಸ್‌ಡಿಪಿಐ ಜೊತೆ ಒಪ್ಪಂದಕ್ಕೆ ಮತ್ತೆ ಕಾಂಗ್ರೆಸ್ ತಯಾರಿ, ಮೌಲ್ವಿಗಳ ಮೂಲಕ ಒತ್ತಡ ಹೇರಿಕೆ!
ಹಾಸನ ಟಿಕೆಟ್ ಗೊಂದಲ, ಭವಾನಿಗೆ ಟಾಂಗ್ ನೀಡಿದ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೇ ಬರಲ್ಲ, ಮತ್ಯಾಕೆ ಸಿಎಂ ಚರ್ಚೆ, ಸಿದ್ದು ಹೇಳಿಕೆಗೆ ತಿರುಗೇಟು, ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಕೋಲಾರದಲ್ಲಿ ಗೊಂದಲ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಭಾರಿ ರಣತಂತ್ರ ರೂಪಿಸುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿ ಕಣಕ್ಕಿಳಿದಿದ್ದ ಎಸ್‌ಡಿಪಿಐ ಕೈಸುಟ್ಟುಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಹೊಸ ದಾಳ ಉರುಳಿಸಿದೆ. ಮುಸ್ಲಿಮ್ ಮೌಲ್ವಿಗಳ ಮೂಲಕ ಎಸ್‌ಡಿಪಿಐ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದೆ. ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳಿರುವ ಕಡೆ ಎಸ್‌ಡಿಪಿಐ ಅಭ್ಯರ್ಥಿಗಳನ್ನು ಹಾಕದಂತೆ ಒತ್ತಡ ಹಾಕಿದೆ. ಇದರಿಂದ ಬಿಜೆಪಿಗೆ ಲಾಭ ಹೆಚ್ಚು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದೆ. ಇದೀಗ 2023ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಒಪ್ಪಂದ ಮಾಡಿಕೊಳ್ಳುವ ಮಾತುಗಳು ಕೇಳಿಬರುತ್ತಿದೆ.