ವಿಶೇ‍ಷ ಸಂದರ್ಶನ: ನಿರೀಕ್ಷೆ ಮೀರಿ ನಮ್ಮ ನಂಬರ್‌ ಹೆಚ್ಚಾಗಲಿದ್ದು, ಸ್ವತಂತ್ರ ಬಲದಿಂದ ಅಧಿಕಾರ ಪಡೆಯುತ್ತೇವೆ : ಸಿಎಂ ಬೊಮ್ಮಾಯಿ

ಬಿಜೆಪಿ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ. ಕಾಂಗ್ರೆಸ್‌ ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿದೆ. ಹಾಗಾಗಿ ಜನ ಅದಕ್ಕೆ ಈ ಸಾರಿ ಬುದ್ಧಿ ಕಲಿಸಲಿದ್ದಾರೆ ಎಂದು ಸಿಎಂ ಸಂದರ್ಶನದಲ್ಲಿ ಹೇಳಿದ್ದಾರೆ.

First Published May 4, 2023, 1:11 PM IST | Last Updated May 4, 2023, 2:40 PM IST

ಬಿಜೆಪಿ ಪರವಾಗಿ ಬಹಳ ದೊಡ್ಡ ಅಲೆ ಇದ್ದು, ನಿರೀಕ್ಷೆ ಮೀರಿ ನಮ್ಮ ನಂಬರ್‌ ಹೆಚ್ಚಾಗಲಿದೆ. ಅದರಂತೆ ಇದೇ ಮೊದಲ ಬಾರಿಗೆ ನಮ್ಮದೇ ಆದ ಸ್ವತಂತ್ರ ಬಲದಿಂದ ಅಧಿಕಾರ ಪಡೆಯುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾಗೆಯೇ ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ಬಳಿ ಬಹಳ ಹತ್ತಿರ ಹೋಗಿದೆ, ಪ್ರವಾಹದಂತಹ ಸಂದರ್ಭದಲ್ಲಿ ನಾವು ನೀಡಿದ ಪರಿಹಾರ ರೈತರಿಗೆ ಸಮಾಧಾನ ತಂದಿದೆ. ಹಾಗೆಯೇ ಕೇಂದ್ರ ಹಾಗೂ ರಾಜ್ಯದ ಕಾರ್ಯಕ್ರಮಗಳಿಂದ ರೈತರಿಗೆ, ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಅಷ್ಟೇ ಅಲ್ಲದೇ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ ಎನ್ನುವ ಮೂಲಕ ತಮಗೆ ಜನ ಯಾಕೆ ಬೆಂಬಲವಾಗಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದರು. ಇನ್ನುಳಿದಂತೆ ಮಹಾನಗರ ಪಾಲಿಕೆ ಇರುವ ನಗರಗಳಲ್ಲಿ ಹೆಚ್ಚಿನ ಉದ್ಯೋಗ ನಿರ್ಮಾಣ ಮಾಡಿದ್ದೇವೆ ಎಂದ ಅವರು, ಕಾಂಗ್ರೆಸ್‌ ಗ್ಯಾರೆಂಟಿ ಬಗ್ಗೆ ಮಾತನಾಡಿ ಉಚಿತ ಅಕ್ಕಿ ವಿತರಣೆಯಲ್ಲಿ ಆದ ಬದಲಾವಣೆ ಬಗ್ಗೆ ವಿವರಿಸಿದರು. 
 

Video Top Stories