Party Rounds: ಬಿಜೆಪಿ ಟಿಕೆಟ್ ತಪ್ಪಿಸಿಕೊಂಡಿರುವ ಸವದಿ ಎಲ್ಲಿಗೆ ಹೋದರೆ ಲಾಭ?

ಅಥಣಿಯಲ್ಲಿ ಬಿಜೆಪಿಯ ಟಿಕೆಟ್‌ ತಪ್ಪಿಸಿಕೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ನಡುವೆ ಬಿಜೆಪಿಯ ಗೆಲ್ಲುವ ಕನಸಿಗೆ ಯಾವ ಕ್ಷೇತ್ರದ ಬಂಡಾಯ ಏಟು ನೀಡಲಿದೆ ಅನ್ನೋ ಕುತೂಹಲವೂ ಶುರುವಾಗಿದೆ.

First Published Apr 13, 2023, 10:47 PM IST | Last Updated Apr 13, 2023, 10:47 PM IST

ಬೆಂಗಳೂರು (ಏ.13): ಲಕ್ಷ್ಮಣ್‌ ಸವದಿ, ಎಂಪಿ ಕುಮಾರಸ್ವಾಮಿ, ನೆಹರು ಓಲೇಕಾರ್‌..ಬಿಜೆಪಿಯಲ್ಲೀಗ ಬಂಡಾಯದ ಬೇಗುದಿ. ಬಹುತೇಕರು ಸಾರ್ವಜನಿಕವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಈ ಬಂಡಾಯಗಾರರು ಯಾವ ಕಡೆಗೆ ಹೋದರೆ ಅವರಿಗೆ ಲಾಭ ಎನ್ನುವುದರ ಕುರಿತು ಚರ್ಚೆ ಆರಂಭವಾಗಿದೆ.

ಅಥಣಿ ಟಿಕೆಟ್‌ ತಪ್ಪಿಸಿಕೊಂಡಿರುವ ಲಕ್ಷ್ಮಣ್‌ ಸವದಿ ಕಾಂಗ್ರೆಸ್‌ಗೆ ಹೋದರೆ ಹೆಚ್ಚಿನ ಲಾಭವಿದೆ. ಅವರು ಬಹುತೇಕ ಕಾಂಗ್ರೆಸ್‌ಗೆ ಹೋಗುವುದು ಕೂಡ ನಿಶ್ಚಯವಾಗಿದೆ. ಅಥಣಿಯಲ್ಲಿ ಅಂದಾಜು 50 ಸಾವಿರ ಮೂಲ ಕಾಂಗ್ರೆಸ್‌ವೋಟುಗಳಿವೆ. ಹಾಗಾಗಿ ಪಕ್ಷೇತರವಾಗಿ ನಿಲ್ಲೋದಕ್ಕಿಂತ ಕಾಂಗ್ರೆಸ್‌ಗೆ ಹೋದರೆ ಅವರಿಗೆ ಹೆಚ್ಚಿನ ಲಾಭ.

Party Rounds: ಬಿಜೆಪಿ 3ನೇ ಪಟ್ಟಿಯಲ್ಲಿ ಯಾರಿಗೆಲ್ಲಾ ಸಿಗಬಹುದು ಟಿಕೆಟ್‌?

ಕುಂದಗೋಳದ ಬಂಡಾಯ ಬಿಜೆಪಿಗೆ ಖಂಡಿತವಾಗಿ ಏಟು ನೀಡಲಿದೆ. ಎಸ್‌ಐ ಚಿಕ್ಕನಗೌಡರ, ಪಕ್ಷೇತರರಾಗಿ ನಿಲ್ತಾರಾ, ಕಾಂಗ್ರೆಸ್‌ ಟಿಕೆಟ್‌ಅಲ್ಲಿ ನಿಲ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ. ತುಮಕೂರು ನಗರದಲ್ಲಿ ಸೊಗಡು ಶಿವಣ್ಣ ಅವರ ಬಂಡಾಯ ಕೂಡ ಪಕ್ಷಕ್ಕೆ ಪೆಟ್ಟು ನೀಡಬಹುದು.

Video Top Stories