ಹೊಸ ಪಕ್ಷದಿಂದ ಬಿಜೆಪಿಗೆ ಹೊಡೆತ, ಜನಾರ್ಧನ ರೆಡ್ಡಿ ಮತ್ತೆ ಬಿಜೆಪಿಗೆ ಕರೆತರಲು ಪ್ರಯತ್ನ!
ಜನರನ್ನು ನಂಬಿದ್ದೇನ, ಜಾತಿಯಲ್ಲ, ಜನಾರ್ಧನ ರೆಡ್ಡಿ ಮಾತಿಗೆ ಬೆಂಬಲಿಗರು ಫಿಧಾ, ಉಡುಪಿ ಕೃಷ್ಣಮಠಕ್ಕೆ ಮುಸಲ್ಮಾನರು ಜಾಗ ನೀಡಿದ್ದು, ಕಾಂಗ್ರೆಸ್ ನಾಯಕನ ವಿವಾದ, ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಹೊಸ ಮಾನದಂಡ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿಸಿದ ಜನಾರ್ಧನ ರೆಡ್ಡಿ ಇದೀಗ ಕೇಸರಿ ಪಡೆಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆ. ರೆಡ್ಡಿ ಹೊಸ ಪಕ್ಷ ಬಿಜೆಪಿ ಮತಗಳನ್ನು ಸಳೆಯುವ ಸಾಧ್ಯತೆಗಳೇ ಗೋಚರಿಸುತ್ತಿದೆ. ಹೀಗಾಗಿ ಜನಾರ್ಧನ ರೆಡ್ಡಿಯನ್ನು ಮತ್ತೆ ಬಿಜೆಪಿಗೆ ಕರೆತರಲು ಹೈಕಮಾಂಡ್ ಪ್ರಯತ್ನ ಮಾಡುತ್ತಿದೆ. ರೆಡ್ಡಿ ಹೊಸ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಜನಾರ್ಧನ ರೆಡ್ಡಿ ಮಾತುಗಳು ಇದೀಗ ಭಾರಿ ವೈರಲ್ ಆಗಿದೆ. ನಾನು ಎಂಎಲ್‌ಎ ಆಗ್ಬೇಕು ಅನ್ನೋ ಲೆಕ್ಕಾಚಾರ ಇದ್ರೆ ಪಕ್ಷ ಕಟ್ಟಬೇಕಾಗಿರಲಿಲ್ಲ. ಬೆಂಗಳೂರಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತಿದ್ದೆ. ಆದರೆ ಜನಾರ್ಧನ ರೆಡ್ಡಿ ಜನರನ್ನು ನಂಬಿಕೊಂಡು ಬಂದವನೂ, ಜಾತಿಯನ್ನಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ಹುಲಿ ಕಾದು ಕಾದು ದೊಡ್ಡ ಜಿಂಕೆಯನ್ನೇ ಹೊಡೆಯುತ್ತದೆ. ಕಾಡಲಿದ್ದರೂ ಹುಲಿ, ಬೋನಲ್ಲಿದ್ದರೂ ಹುಲಿ ಹುಲಿಯೇ ಎಂದು ರೆಡ್ಡಿ ಹೇಳಿದ್ದಾರೆ.