ಕಮಲ+ದಳ.. ವಿಜಯೇಂದ್ರ+ಎಚ್.ಡಿ.ಕೆ.. ಹೇಗಿದೆ ಮೈತ್ರಿವ್ಯೂಹ..?
ಅಮಿತ್ ಶಾ ಸಮ್ಮುಖದಲ್ಲೇ ನಿರ್ಧಾರವಾಗಲಿದೆ ಸೀಟು ಲೆಕ್ಕ..!
4 ಸೀಟು ಕೇಳ್ತಿದೆ ಜೆಡಿಎಸ್.. ಮೂರೇ ಸಾಕು ಅಂತಿದೆ ಬಿಜೆಪಿ..!
ಲೋಕಸಭಾ ಅಖಾಡದಲ್ಲಿ ಕಾಣಿಸಿಕೊಳ್ತಾರಾ ಕುಮಾರಸ್ವಾಮಿ..?
ಮೈತ್ರಿ ಗಟ್ಟಿಗೊಳಿಸಲು ಕಮಲದಳ ನಾಯಕರ ಮೆಗಾ ಪ್ಲಾನ್..!
ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದೆ. ಕಾಂಗ್ರೆಸ್‌ಗೆ(Congress) ಸಡ್ಡು ಹೊಡೆಯಲು ಬಿಜೆಪಿ ಮತ್ತಿ ಜೆಡಿಎಸ್(JDS) ಮಧ್ಯೆ ಮೈತ್ರಿ ಫಿಕ್ಸ್ ಆಗಿದೆ. ಮೈತ್ರಿ ರಣಕಹಳೆ ಮೊಳಗಿಸಿರೋ ದೋಸ್ತಿಗಳ ಮಧ್ಯೆಯೀಗ ಸೀಟು ಹಂಚಿಕೆ ಕಗ್ಗಂಟು. ಈ ಕಗ್ಗಂಟನ್ನು ಬಿಡಿಸಲು ದೆಹಲಿಗೆ ಹಾರಿದ್ದಾರೆ ದಳಪತಿ ಮತ್ತು ಕಮಲಪತಿ. ರಾಜ್ಯ ರಾಜಕಾರಣದಲ್ಲೀಗ ಕಮಲದಳ ದೋಸ್ತಿ ರಾಗ. ಬಿಜೆಪಿ(BJP) ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿವ್ಯೂಹ ಹೆಣೆದು ಲೋಕಸಭಾ ಚುನಾವಣೆಯನ್ನು ಎದುರಿಸಲು ರೆಡಿಯಾಗಿವೆ. ಕಮಲದಳ ದೋಸ್ತಿವ್ಯೂಹದ ಟಾರ್ಗೆಟ್ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜೋಡಿ ಸಾರಥ್ಯದ ಕಾಂಗ್ರೆಸ್. ಲೋಕಸಭಾ ಚುನಾವಣೆಯಲ್ಲಿ(Loksabha Election) ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲೋದು ಬಿಜೆಪಿ ಟಾರ್ಗೆಟ್. ಆದ್ರ ರಾಜ್ಯದಲ್ಲೀಗ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿರೋದ್ರಿಂದ ಟಾರ್ಗೆಟ್ 20 ರೀಚ್ ಆಗೋದು ಕಷ್ಟ ಎಂಬುದನ್ನು ಅರಿತಿರೋ ಬಿಜೆಪಿ, ಮೈತ್ರಿಮಂತ್ರ ಜಪಿಸುತ್ತಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ರೆ, ಅಂದುಕೊಂಡನ್ನು ಸಾಧಿಸೋದು ಕಷ್ಟಸಾಧ್ಯ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡಿರೋ ಕಮಲ ನಾಯಕರು, ಜೆಡಿಎಸ್ ಜೊತೆ ಕೈಜೋಡಿಸಿ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿ ಬಿಟ್ಟಿದ್ದಾರೆ. ಈಗಾಗ್ಲೇ ದೆಹಲಿಯಲ್ಲಿ ಅಮಿತ್ ಶಾ ಒಡ್ಡೋಲಗದಲ್ಲೇ ಮೈತ್ರಿವ್ಯೂಹ ರೆಡಿಯಾಗಿದ್ದು, ಸೀಟು ಹಂಚಿಕೆಯೊಂದೇ ಬಾಕಿ. ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕಳೆದ ಸೆಪ್ಟೆಂಬರ್'ನಲ್ಲೇ ಘೋಷಣೆಯಾಗಿದೆ. ಈಗಿರೋ ಕುತೂಹಲ ಯಾರಿಗೆಷ್ಟು ಸೀಟು ಅನ್ನೋದು. ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ..? ಜೆಡಿಎಸ್'ಗೆ ಸಿಗಲಿರೋ ಕ್ಷೇತ್ರಗಳೆಷ್ಟು..? ಈ ಪ್ರಶ್ನೆಗೆ ಉತ್ತರ ಸಿಗುವ ಸಮಯ ಹತ್ತಿರ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇಬ್ಬರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿರುವ ವಿಜಯೇಂದ್ರ ಮತ್ತು ಎಚ್ಡಿಕೆ, ಸೀಟು ಹಂಚಿಕೆ ವಿಚಾರವನ್ನು ಫೈನಲ್ ಮಾಡಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಲೋಕಸಂಗ್ರಾಮದ ಮೈತ್ರಿನಾಯಕನ ಪ್ಲಸ್-ಮೈನಸ್ ಏನು..? ಮೋದಿ ವಿರುದ್ಧ ಹೇಗೆ ಗುಡಗಲಿಗೆ ಖರ್ಗೆ ಸೇನೆ!