News Hour: ರಾಜ್ಯದಲ್ಲಿ ಶುರುವಾಗುತ್ತಾ 'ಆಪ್ತಮಿತ್ರ' ಪಾಲಿಟಿಕ್ಸ್‌!

ಬಿಜೆಪಿ-ಜೆಡಿಎಸ್‌ ಮೈತ್ರಿ ಬಹುತೇಕ ಖಚಿತವಾಗುತ್ತಿರುವ ನಡುವೆ, ಜೆಡಿಎಸ್‌ ಬೇಡಿಕೆ ಇಡಲಿರುವ ಕ್ಷೇತ್ರಗಳ ಪಟ್ಟಿಯ ಚರ್ಚೆಯೂ ಆರಂಭವಾಗಿದೆ. ಇದರ ನಡುವೆ ಜೆಡಿಎಸ್‌ನ ಬೇಡಿಕೆಯನ್ನು ಬಿಜೆಪಿ ಹೈಕಮಾಂಡ್‌ ಒಪ್ಪಲಿದೆಯೇ ಎನ್ನುವ ಪ್ರಶ್ನೆಯೂ ಎದ್ದಿದೆ.

First Published Jul 15, 2023, 11:05 PM IST | Last Updated Jul 15, 2023, 11:05 PM IST

ಬೆಂಗಳೂರು (ಜು.15): ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರು ಹೀನಾಯ ಸೋಲು ಕಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಹೋರಾಟ ನೀಡುವ ಸುಳಿವು ನೀಡಿದೆ. ಈ ಕುರಿತು ಶೀಘ್ರದಲ್ಲಿಯೇ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ.

ಜುಲೈ 18 ರಂದು ಎನ್‌ಡಿಎ ಸಭೆ ನಡೆಯಲಿದ್ದು, ಆ ಬಳಿಕ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿಗೆ ಅಂತಿಮ ಮುದ್ರೆ ಬೀಳಲಿದೆ. ಜೆಡಿಎಸ್‌ ಮೈತ್ರಿಗೆ ಒಪ್ಪಿಕೊಂಡಿರುವ ಹಿಂದಿರುವ ಲೆಕ್ಕಾಚಾರವೇನು ಎನ್ನುವುದರ ವಿವರ ಇಲ್ಲಿದೆ.

PARTY ROUNDS: ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಬಹುತೇಕ ಫೈನಲ್‌?

ಇನ್ನೊಂದೆಡೆ ವಿಧಾನಸಭೆಯ ಸೋಲಿನ ಬಳಿಕ ಆಕ್ಟೀವ್‌ ಆಗಿರುವ ಮಾಜಿ ವಸತಿ ಸಚಿವ ವಿ.ಸೋಮಣ್ಣ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.