ಕಿಚ್ಚ ಸುದೀಪ್ ಬೆಂಬಲದಿಂದ ಬಿಜೆಪಿಗೆ ಲಾಭ ಏನು? ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ!

ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೊಂದೇ ಅಚ್ಚರಿಗಳು ಹೊರಬೀಳುತ್ತಿದೆ. ಇದೀಗ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಸೂಚಿಸಿರುವುದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದರಿಂದ ಬಿಜೆಪಿಗೆ ಆಗುವ ಲಾಭ ಏನು? ಇಲ್ಲಿದೆ ವಿವರ.

First Published Apr 5, 2023, 11:58 PM IST | Last Updated Apr 5, 2023, 11:58 PM IST

ನನ್ನ ಕಷ್ಟಕ್ಕೆ ಬೆಂಬಲವಾಗಿ ನಿಂತವರಿಗೆ ನಾನು ಬೆಂಬಲ ನೀಡುತ್ತಿದ್ದೇನೆ. ಬಸವರಾಜ್ ಬೊಮ್ಮಾಯಿಗೆ ನನ್ನ ಬೆಂಬಲ ಇದೆ. ಈ ಬಾರಿಯ ಚುನಾವಣೆಯಲ್ಲಿ ಬೊಮ್ಮಾಯಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಕಿಚ್ಚ ಸುದೀಪ್ ಮಾಡಿದ ಘೋಷಣೆ ಭಾರಿ ತಲ್ಲಣಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್‌ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಮಾಧ್ಯಮಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮೋದಿ ನಾಯಕತ್ವನ್ನು ಒಪ್ಪಿಕೊಂಡಿದ್ದೇನೆ.ಆದರೆ ಸಿಬಿಐ, ಐಟಿ ರೇಡ್‌ಗೆ ಹೆದರಿ ಬರುವ ವ್ಯಕ್ತಿ ನಾನಲ್ಲ. ಒತ್ತಡದಿಂದ ಬರುವ ವ್ಯಕ್ತಿಯಾಗೆ ನಿಮಗೆ ಕಾಣುತ್ತಿದ್ದೇನಾ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ನಟ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಘೋಷಿಸಿರುವ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ವಾಲ್ಮೀಕಿ ಸಮುದಾಯಕ್ಕ ಸೇರಿರುವ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಘೋಷಿಸಿರುವುದು ಚುನಾವಣೆಯಲ್ಲಿ ಯಾವ ರೀತಿ ಲಾಭವಾಗಲಿದೆ?
 

Video Top Stories