ಮಾಜಿ ಸಚಿವ ಜನಾದರ್ನ ರೆಡ್ಡಿ ಸ್ಥಿತಿ ರಾಗಿಣಿ ದ್ವಿವೇದಿಗೂ ಬಂತು..!

ಮಾಜಿ ಸಚಿವ ಗಾಲಿ ಜನಾದರ್ನ ರೆಡ್ಡಿ ಸ್ಥಿತಿ ಇದೀಗ ನಟಿ ರಾಗಿಣಿ ದ್ವಿವೇದಿಗೆ ಬಂದಿದೆ.

First Published Sep 6, 2020, 4:53 PM IST | Last Updated Sep 6, 2020, 4:53 PM IST

ಬೆಂಗಳೂರು, (ಸೆ.06): ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಆಚೆ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದೇ ಯಡಿಯೂರಪ್ಪನವರು ರಾಜ್ಯಾಧ್ಯರಾಗಿದ್ದಾಗ ಹೇಳಿದ್ದರು. ಇದರಿಂದ ರೆಡ್ಡಿ ರಾಜಕೀಯ ನೆಲೆ ಇಲ್ಲದೇ ಸೈಲೆಂಟ್ ಆಗಿದ್ದಾರೆ.

ರಾಗಿಣಿ ಅರೆಸ್ಟ್: ನಮ್ಮ ಪಕ್ಷಕ್ಕೂ, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದ ಸಚಿವ

ಇದೀಗ ಇದೇ ಪರಿಸ್ಥಿತಿ ನಟಿ ರಾಗಿಣಿ ದ್ವಿವೇದಿ ಅವರಿಗೆ ಬಂದಿದೆ. ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದ್ದ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿದ್ದೇ ತಡ ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳಿತ್ತಿದ್ದಾರೆ.