ಬಿಟಿಎಂ ಪಿಜಿ ವಿದ್ಯಾರ್ಥಿಗಳ ಮೇಲಿನ‌ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ವಿದ್ಯಾರ್ಥಿಗಳಿಂದ ಪೊಲೀಸರಿಗೆ ದೂರು

ಬೆಂಗಳೂರಿನ ಬಿಟಿಎಂನಲ್ಲಿ ಪಿಜಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದು, ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಟಡ ಮಾಲೀಕ ಮತ್ತು ಪಿಜಿ ಮಾಲೀಕರ ನಡುವಿನ ಜಗಳದಿಂದಾಗಿ ಈ ಘಟನೆ ನಡೆದಿದೆ.

First Published Dec 15, 2024, 2:25 PM IST | Last Updated Dec 15, 2024, 2:29 PM IST

ಬೆಂಗಳೂರು: ಕಟ್ಟಡ ಮಾಲೀಕ ಹಾಗೂ ಪಿಜಿ ಮಾಲೀಕರ ನಡುವಿ‌ನ ಜಟಾಪಟಿಯಿಂದಾಗಿ ಅಮಾಯಕ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.  ಕಟ್ಟಡ  ಮಾಲೀಕರಿಗೆ ಪಿಜಿ‌ ಮಾಲೀಕರು ಹಣ ಕೊಡದ  ಕಾರಣ ಪಿಜಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಕಟ್ಟಡ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಿಜಿ ಖಾಲಿ ಮಾಡುವಂತೆ ಧಮ್ಕಿ  ಹಾಕಲಾಗಿದ್ದು, ಕೇಳದಿದ್ದಾಗ  ಕಟ್ಟಡ ಮಾಲಿಕ ನೇರವಾಗಿ ನುಗ್ಗಿ ಹಲ್ಲೆ ಮಾಡಿದ್ದಾನೆ. ಅಲ್ಲದೇ ಬಾಡಿಗೆ ಹಣ ನಮಗೆ ಕೊಡ್ಬೇಕೆಂದು ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾನೆ. ನಾವೂ ಪಿಜಿ ಮಾಲೀಕರಿಗೆ ಕೊಟ್ಟಿದ್ದೇವೆ, ನಿಮಗೆ ಕೊಡಲ್ಲವೆಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳನ್ನು ಹೊರಗಟ್ಟಿದ್ದ ಮಾಲೀಕ ಪಿಜಿಗೆ ಬೀಗ ಜಡಿದಿದ್ದಾನೆ.

ಮಾಜಿ ಉಪಮೇಯರ್ ಶಹತಾಜ್ ಖಾನ್‌ಗೆ ಸೇರಿದ ಕಟ್ಟಡ ಇದಾಗಿದ್ದು,  ಹಾಲ್ ಟಿಕೆಟ್, ಬಸ್ ಪಾಸ್, ಲ್ಯಾಪ್ ಟಾಪ್ ಬುಕ್ಸ್ ಪಿಜಿಯಲ್ಲಿದೆ.  ಹೀಗಾಗಿ ನಮ್ಮ ಲಗೇಜ್ ಬುಕ್ಸ್ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದು, ಎಸ್ ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.