ಚಿಕ್ಕಮಗಳೂರು, (ಸೆ.05): ಡ್ರಗ್ಸ್ ಮಾಫಿಯಾ ತನಿಖೆ ಸಂಬಂಧ ರಾಜಕೀಯ ಒತ್ತಡವಿದೆ ಹೇಳಿಕೆ ಮಾರ್ಮಿಕವಾಗಿ ಹೇಳಿದ್ದು.  ಕೆಲವರು ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡ್ಕೊಂಡು ಹಿಂದೆ ರಾಜಕಾರಣ ಮಾಡಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಯೂಟರ್ನ್ ಹೊಡೆದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು,  ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡ್ಬೋದು. ಬಿಜೆಪಿ ಇಂತವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ, ಮಾಡಲ್ಲ ಒತ್ತಡವಿದ್ರೆ ಇಷ್ಟೊಂದು ಸಮಗ್ರ ತನಿಖೆ ನಡೆಯುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಡ್ರಗ್ಸ್ ಮಾಫಿಯಾ ತನಿಖೆ ಮೇಲೆ ರಾಜಕಾರಣಿಗಳ ಒತ್ತಡ: ಸಚಿವ ಸಿ.ಟಿ ರವಿ ಸ್ಫೋಟಕ ಹೇಳಿಕೆ

ರಾಜ್ಯಕ್ಕೆ ಡ್ರಗ್ ಕೇಸ್ ಹೊಸದಲ್ಲ, ಇಷ್ಟು ಗಂಭೀರವಾಗಿರೋದು ಇದೇ ಮೊದಲು. ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ. ಸಾಂದರ್ಭೀಕ ಸಾಕ್ಷಿಯಲ್ಲಿ ಅವರ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಇನ್ನು ನಟಿ ರಾಗಿಣಿ ದ್ವಿವೇದಿ ಅರೆಸ್ಟ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. 
ನಟಿಯಾಗಿ ತನ್ನದೇ ಆದ ಸ್ಥಾನ ಪಡೆದವರು. ನಮ್ಮ ಪಕ್ಷಕ್ಕೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಾಂಪ್ರಮೈಸ್ ಮಾಡ್ಕೊಂಡು ಅವರ ಜೊತೆ ಅಡ್ಜಸ್ಟ್‍ಮೆಂಟ್ ರಾಜಕಾರಣ ಮಾಡುವ ಪಕ್ಷ ನಮ್ಮದ್ದಲ್ಲ  ಯಾರೇ ಆದ್ರು ಸರಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು.

 ತನಿಖೆ ನಡೆಯುತ್ತಿದೆ, ಹೊಸ ಆಯಾಮ ಸಿಕ್ಕರೆ ಕೇಂದ್ರದ ಸಹಾಯ ಪಡೆಯಬಹುದು ಎಂದು ಹೇಳುವ ಮೂಲಕ ಹೊಸ ಸುಳಿವು ಕೊಟ್ಟರು.