News Hour: ಅರ್‌ಜೆಡಿ, ಜೆಡಿಯು ಮೈತ್ರಿ ಕಗ್ಗಂಟು...ಕಂಗಾಲಾದ ಕಾಂಗ್ರೆಸ್!

ಬಿಹಾರ ರಾಜಕೀಯ ಹೈಡ್ರಾಮಾಗೆ ಭಾನುವಾರ ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆ ಇದೆ.. ಬೆಳಗ್ಗೆ ನಿತೀಶ್‌ ಕುಮಾರ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಜೆ ಪದಗ್ರಹಣ ಮಾಡುವ ಸಾಧ್ಯತೆ ಇದೆ. ನಿತೀಶ್‌ಕುಮಾರ್‌ ನಡೆ ಬಗ್ಗೆ ಮೂರು ಪಕ್ಷಗಳಲ್ಲೂ ಸಂಚಲನ ಮೂಡಿಸಿದೆ.
 

First Published Jan 27, 2024, 10:43 PM IST | Last Updated Jan 27, 2024, 10:43 PM IST

ಬೆಂಗಳೂರು (ಜ.27): ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಮೈತ್ರಿ ಕಗ್ಗಂಟಿಗೆ ಕಾಂಗ್ರೆಸ್‌ ಕಂಗಾಲಾಗಿದೆ. ಬಿಹಾರದ ಕಾಂಗ್ರೆಸ್‌ಗೆ ಆಪರೇಷನ್‌ ಕಮಲದ ಭಯ ಕಾಡುತ್ತಿದೆ. ಬಿಹಾರದ 19 ರಲ್ಲಿ 9 ಶಾಸಕರನ್ನು ಸೆಳೆಯಲೂ ಬಿಜೆಪಿ ರಣರಂತ್ರ ರೂಪಿಸಿದೆ.

ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬಿಜೆಪಿಯ 20 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದ ಬಿಹಾರ ಕಾಂಗ್ರೆಸ್‌ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಹೇಳಿದ್ದಾರೆ. ಈ ನಡುವೆ ನಿತೀಶ್ ಮನವೊಲಿಸಲೂ ಖರ್ಗೆ, ಸೋನಿಯಾ ಹರಸಾಹಸ ಪಟ್ಟಿದ್ದಾರೆ. ಐದೈದು ಬಾರಿ ಕರೆ ಮಾಡಿದರೂ ನಿತೀಶ್‌ ಕುಮಾರ್‌ ಕರೆ ಸ್ವೀಕರಿಸಿಲ್ಲ.

ನಾಳೆ ಬಿಜೆಪಿ - ನಿತೀಶ್‌ ಸರ್ಕಾರ? ಸಿಎಂ ಆಗಿ 9ನೇ ಬಾರಿ ನಿತೀಶ್ ಪ್ರಮಾಣ: ಬಿಜೆಪಿಗೆ 2 ಡಿಸಿಎಂ?

ಮೂರು ತಿಂಗಳ ನಂತರ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರಲಿರುವ ಹಿನ್ನಲೆಯಲ್ಲಿ ಬಿಹಾರ ರಾಜಕಾರಣ ಪ್ರಮುಖವಾಗಿದೆ. ಆದರೆ, ಬಿಹಾರದಲ್ಲಿ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಎಲ್ಲಾ ಡ್ರಾಮಾಗಳಿಗೆ ಭಾನುವಾರ ತೆರೆ ಬೀಳುವ ಸಾಧ್ಯತೆ ಇದೆ.