News Hour: ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಅಚ್ಚರಿ, ಅಡ್ವಾಣಿ, ವಾಜಪೇಯಿ ಕಾಲದ ನಾಯಕರಿಗೆ ಗೇಟ್‌ಪಾಸ್
ನಿರೀಕ್ಷೆಯಂತೆಯೇ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಮುಖವನ್ನು ಬಿಜೆಪಿ ಘೋಷಣೆ ಮಾಡಿದ. ಮೊದಲ ಬಾರಿ ಶಾಸಕರಾಗಿ ಗೆಲುವು ಕಂಡಿದ್ದ ಸಂಗನೇರ್ ಕ್ಷೇತ್ರದ ಭಜನ್ ಲಾಲ್ ಶರ್ಮ ಅವರನ್ನು ರಾಜಸ್ಥಾನದ ಸಿಎಂ ಆಗಿ ಘೋಷಣೆ ಮಾಡಿದೆ.
ನವದೆಹಲಿ (ಡಿ.12): ಮೊದಲ ಬಾರಿಗೆ ಶಾಸಕರಾಗಿದ್ದ ಭಜನ್ ಲಾಲ್ ಶರ್ಮಾ ಅವರನ್ನು ಮುಂದಿನ ರಾಜಸ್ಥಾನ ಸಿಎಂ ಆಗಿ ಘೋಷಣೆ ಮಾಡಲಾಗಿದೆ. ಜೈಪುರದಲ್ಲಿ ನಡೆದ BJP ಶಾಸಕಾಂಗ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಸಂಗನೇರ್ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿದ್ದ ಭಜನ್ ಲಾಲ್, ಬ್ರಾಹ್ಮಣ ಸಮುದಾಯದವರು. ಇದರೊಂದಿಗೆ ಅಡ್ವಾಣಿ, ವಾಜಪೇಯಿ ಕಾಲದ ನಾಯಕರಿಗೆ ಬಿಜೆಪಿಯಲ್ಲಿ ಗೇಟ್‌ಪಾಸ್ ನೀಡಲಾಗಿದೆ.
ಭಜನ್‌ಲಾಲ್ ಅವರನ್ನು ಸಿಎಂ ಆಗಿ ಘೋಷಣೆ ಮಾಡುವುದರೊಂದಿಗೆ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇಗೆ ನಿರಾಸೆ ಎದುರಾಗಿದೆ. ರಾಜಸ್ಥಾನ ಮಾತ್ರವಲ್ಲ ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲೂ ಹೊಸಬರಿಗೆ ಅವಕಾಶ ನೀಡಲಾಗಿದೆ.
Breaking: ಭಜನ್‌ಲಾಲ್ ಶರ್ಮ ರಾಜಸ್ಥಾನದ ಮುಂದಿನ ಸಿಎಂ
ಛತ್ತೀಸ್ಗಢ ಮಧ್ಯ ಪ್ರದೇಶದಂತೆ ರಾಜಸ್ಥಾನದಲ್ಲೂ ಇಬ್ಬರು ಡಿಸಿಎಂ ನಿಯುಕ್ತಿ ಮಾಡಲಾಗಿದೆ. ರಾಜ ಕುಟುಂಬದ ದಿಯಾ ಕುಮಾರಿ, ಪ್ರೇಮ್‌ಚಂದ್ ಬೈರ್ವಾಗೆ ಡಿಸಿಎಂ ಹುದ್ದೆ ನೀಡಲಾಗಿದ್ದು, ಸ್ಪೀಕರ್ ಆಗಿ ವಾಸುದೇವ್ ದೇವ್ನಾನಿ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ರಾಜಸ್ಥಾನದಲ್ಲಿ ಬ್ರಾಹ್ಮಣ, ರಜಪೂತ, ಎಸ್ಸಿ ಸೂತ್ರವನ್ನು ಬಿಜೆಪಿ ಹಣೆದಿದೆ.