Asianet Suvarna News Asianet Suvarna News

ಮತದಾರರ ಪಟ್ಟಿಗೆ ಹೆಸರು ಸೇರಿಸಲು 1 ವರ್ಷದಿಂದ ಪರದಾಟ; ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತದಾರನ ಆಕ್ರೋಶ

ಮತದಾನಕ್ಕೆ ಅವಕಾಶ ಸಿಗದೇ ಇದ್ದಿದ್ದಕ್ಕೆ ಮತದಾರರೊಬ್ಬರು ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

ಬೆಂಗಳೂರು (ನ. 03): ಮತದಾನಕ್ಕೆ ಅವಕಾಶ ಸಿಗದೇ ಇದ್ದಿದ್ದಕ್ಕೆ ಮತದಾರರೊಬ್ಬರು ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಮತದಾರರ ಪಟ್ಟಿಗೆ ಹೆಸರು ಸೇರಿಸಲು 1 ವರ್ಷದಿಂದ ಬಿಬಿಎಂಪಿಗೆ ಅಲೆಯುತ್ತಿದ್ದೇನೆ. ನಾಳೆ ಬನ್ನಿ, ನಾಡಿದ್ದು ಬನ್ನಿ, ಮಧ್ಯಾಹ್ನ 3 ಗಂಟೆ ಬನ್ನಿ ಅಂತ ಹೇಳಿ ಅಲೆದಾಡಿಸಿದ್ದಾರೆ. ಎಷ್ಟು ಕೇಳಿದ್ರೂ ಅವರನ್ನು ಕೇಳಿ, ಇವರನ್ನು ಕೇಳಿ ಎಂದು ಸತಾಯಿಸುತ್ತಾರೆ. ನಾವು ದಾಖಲೆಗಳನ್ನು ಸರಿಯಾಗಿಯೇ ಕೊಟ್ಟಿದ್ದೇವೆ. 1 ವರ್ಷವಾದರೂ ಇನ್ನೂ ಮತದಾರರ ಪಟ್ಟಿಗೆ ನಮ್ಮ ಹೆಸರನ್ನು ಸೇರಿಸಿಲ್ಲ' ಎಂದು ಮತದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮತದಾರರಿಗೆ ಉಚಿತ ಆಟೋ ವ್ಯವಸ್ಥೆ; ಸಂಜೆಯವರೆಗೆ ಸೇವೆ ಲಭ್ಯ