ಸಿದ್ದರಾಮಯ್ಯರನ್ನ ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿದೆ : ಡಿಕೆಶಿ ವಿರುದ್ದ ಸಿಎಂ ಗರಂ

ಚುನಾವಣೆ ಗೆಲ್ಲಲು ಮೂರು ಪಕ್ಷಗಳಿಂದ ರಣತಂತ್ರ
ಯಡಿಯೂರಪ್ಪರನ್ನ ಮುಗಿಸುತ್ತಾರೆ ಎಂದ ಡಿಕೆಶಿ
ಡಿಕೆಶಿ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು

First Published Apr 22, 2023, 3:18 PM IST | Last Updated Apr 22, 2023, 3:18 PM IST

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳು ಸಹ ಜೋರಾಗಿಯೇ ಇವೆ.  ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಗಿಸುತ್ತಾರೆ ಎಂದು ಡಿಕೆಶಿ ಆರೋಪ ಮಾಡಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈಗ ಅವರು ಸಿದ್ದರಾಮಯ್ಯ ಅವರನ್ನು ಹೇಗೆ ಮುಗಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಕಳೆದ ಬಾರಿ ಅವರನ್ನು ಚಾಂಮುಡೇಶ್ವರಿಯಲ್ಲಿ ಮುಗಿಸಿದ್ರು. ಈ ಬಾರಿ ವರುಣದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಈತರದ ಮಾತುಗಳಿಗೆ ಉತ್ತರವನ್ನು ಕೊಡೋಕೆ ಆಗಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಎರಡು ದಿನ ಬಿಜೆಪಿ ಪರ ನಟ ಸುದೀಪ್‌ ಕ್ಯಾಂಪೇನ್‌: ಸಿಎಂ ಬೊಮ್ಮಾಯಿ

Video Top Stories