ಹ್ಯೂಬ್ಲೆಟ್ ವಾಚು.. ಪಂಚೆ.. ಖಾಕಿ ಚಡ್ಡಿ.. ಏನಿದು "ಉರಿ" ಮಾತು?
ಹೋದಲ್ಲಿ ಬಂದಲ್ಲಿ ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ ಸಿದ್ದು ದುಷ್ಮನ್..!
ಮುಖ್ಯಮಂತ್ರಿ ಪಟ್ಟದ ಬುಡದಲ್ಲೇ ಭುಗಿಲೆದ್ದ "ಹರಿ ಉರಿ" ಬಂಡಾಯ..!
ಅಂದು ಬಿಜೆಪಿಗೆ ಯತ್ನಾಳ್,ಇಂದು ಕಾಂಗ್ರೆಸ್‌ಗೆ ಹರಿಪ್ರಸಾದ್,ಟಾರ್ಗೆಟ್ ಸಿಎಂ..!
ಅವತ್ತು ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಇವತ್ತು ಕಾಂಗ್ರೆಸ್‌ನಲ್ಲಿ(Congress) ಬಿ.ಕೆ ಹರಿಪ್ರಸಾದ್(B K Hariprasad). ಪಕ್ಷ ಬೇರೆ, ವ್ಯಕ್ತಿ ಬೇರೆ. ಆದ್ರೆ ಪಾತ್ರ ಒಂದೇ, ಗುರಿಯೂ ಒಂದೇ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ.. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 115 ದಿನಗಳಾದ್ರೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಆದ್ರೂ ಬಿಜೆಪಿಗೆ ಚಿಂತೆಯಿಲ್ಲ. ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(Siddaramaiah) ಕಾಂಗ್ರೆಸ್‌ನಲ್ಲೇ ವಿಪಕ್ಷ ನಾಯಕರೊಬ್ಬರಿದ್ದಾರೆ. ಅವರು ಹೆಜ್ಜೆ ಹೆಜ್ಜೆಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗುತ್ತಿದ್ದಾರೆ, ಗುಟುರು ಹಾಕ್ತಿದ್ದಾರೆ. ಸಿದ್ದು ತಾಕತ್ತಿಗೇ ಸವಾಲ್ ಹಾಕ್ತಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್‌ನಲ್ಲೇ ಮೊಳಗಿರೋ ಬಂಡಾಯದ ಕಹಳೆಯ ಕತೆ. ಕಾಂಗ್ರೆಸ್'ನ ಹಿರಿಯ ನಾಯಕ, ಗಾಂಧಿ ಕುಟುಂಬದ ಅತ್ಯಾಪ್ತ, ವಿಧಾನ ಪರಿಷಕ್ ಸದಸ್ಯ ಬಿ.ಕೆ ಹರಿಪ್ರಸಾದ್ ಮತ್ತೆ ಸಿದ್ದರಾಮಯ್ಯ ವಿರುದ್ಧ ಅಬ್ಬರಿಸೋದಕ್ಕೆ ಶುರು ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿ ಮಾಡೋದೂ ಗೊತ್ತು, ಕುರ್ಚಿಯಿಂದ ಇಳಿಸೋದೂ ಗೊತ್ತು ಅಂತ ಹೇಳಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದ ಹರಿಪ್ರಸಾದ್, ಈಗ ಮತ್ತೆ ಸಿದ್ದು ವಿರುದ್ಧ ಗುಡುಗಿದ್ದಾರೆ. ಬಿಜೆಪಿಯ ರೆಬೆಲ್ ಶಾಸಕ ಯತ್ನಾಳ್ ಅವತಾರದಲ್ಲಿ ಕಾಣಿಸಿಕೊಂಡು ಸಿದ್ದು ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ ಬಿ.ಕೆ ಹರಿಪ್ರಸಾದ್.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಮಣಿಸಲು ‘ಕಮಲ-ದಳ’ ಮೈತ್ರಿ ಯುದ್ಧ: ಗಣೇಶನ ಹಬ್ಬದ ಬಳಿಕ ಆಗುತ್ತಾ ಅಧಿಕೃತ ಘೋಷಣೆ ?