athirathara akhada: ಕಾರ್ಕಳದಲ್ಲಿ ಹಿಂದುತ್ವV|S ಹಿಂದುತ್ವ ಫೈಟ್‌..ಸುನೀಲ್‌ ಕುಮಾರ್‌ಗೆ ಸಡ್ಡು ಹೊಡೆಯುತ್ತಾರಾ ಮುತಾಲಿಕ್‌..?

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರವು  ಕಣದಲ್ಲಿರಬಹುದಾದ ಅಭ್ಯರ್ಥಿಗಳಿಂದಾಗಿ ರಾಜ್ಯದಲ್ಲಿ  ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇಂಧನ ಸಚಿವ ಸುನಿಲ್ ಕುಮಾರ್ ಎದುರು ಪಕ್ಷೇತರರಾಗಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್  ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. 
 

First Published Apr 26, 2023, 4:53 PM IST | Last Updated Apr 26, 2023, 4:53 PM IST

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರವು  ಕಣದಲ್ಲಿರಬಹುದಾದ ಅಭ್ಯರ್ಥಿಗಳಿಂದಾಗಿ ರಾಜ್ಯದಲ್ಲಿ  ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇಂಧನ ಸಚಿವ ಸುನಿಲ್ ಕುಮಾರ್ ಎದುರು ಪಕ್ಷೇತರರಾಗಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್  ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪ್ರಮೋದ್‌ ಮುತಾಲಿಕ್‌ ಹಾಗೂ ಸುನೀಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಮಾಡಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದೂ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಮೋದ್‌ ಮುತಾಲಿಕ್‌ ಪ್ರಚಾರ ನಡೆಸುತ್ತಿದ್ದುಹಿಂದೂ ಕಾರ್ಯಕರ್ತರ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರು ಪ್ರಮೋದ್‌ ಮುತಾಲಿಕ್‌ ಪರ ಪ್ರಚಾರಕ್ಕಿಳಿದಿದ್ದರೆ,  ಬಹುತೇಕರು ಶಾಸಕ ಸುನೀಲ್‌ ಕುಮಾರ್‌ ಪರವಾಗಿದ್ದಾರೆ. ಹಾಗಾದರೆ ಸುನೀಲ್‌ ಕುಮಾರ್‌ಗೆ ಸೆಡ್ಡು ಹೊಡೆಯುತ್ತಾರಾ ಮುತಾಲಿಕ್‌..? ಹಿಂದುತ್ವಕ್ಕೆ  ಫೈಟ್‌ ಕೊಡ್ತಾರ ಉದಯ್‌ಕುಮಾರ್‌ ಶೆಟ್ಟಿ..?

Video Top Stories