ಬಿಜೆಪಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸೋ ರಣಕಲಿಗಳು ಯಾರು..ಹೇಗಿರಲಿದೆ ಮೂರನೇ ಅಲೆಯ ಬಂಡಾಯ..?
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ. ಪಕ್ಷವು ಇನ್ನೂ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.
ಒಂದು ಪಿಡಿಎಫ್ ಫೈಲ್‌ಅನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಈಗ ಮೂರನೇ ಪಟ್ಟಿಯ ಕುತೂಹಲ ಆರಂಭವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿ ಬಿಡುಗಡೆಗೆ ಒಂದು ಸುದ್ದಿಗೋಷ್ಠಿ ಮಾಡಿ ವ್ಯವಸ್ಥಿತವಾಗಿ ಹೆಸರನ್ನು ಘೋಷಣೆ ಮಾಡಿದ್ದ ಬಿಜೆಪಿ ಪಕ್ಷ ತನ್ನ 2ನೇ ಲಿಸ್ಟ್‌ಅನ್ನು ಹೆಚ್ಚಿನ ಸುದ್ದಿಯಲ್ಲದೆ ಒಂದು ಪಿಡಿಎಫ್ ಫೈಲ್ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಬಿಜೆಪಿ 23 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಅದರೊಂದಿಗೆ ಒಟ್ಟು 212 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆದಂತಾಗಿದೆ. ಇನ್ನೂ 12 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಬಾಕಿ ಇದ್ದು, ಇದರಲ್ಲೂ ಹಿರಿಯರಿಗೆ ಟಿಕೆಟ್ ಅನುಮಾನ ಎನ್ನುವ ಲಕ್ಷಣಗಳ ಕಾಣುತ್ತಿವೆ. ಹಾಗಾದರೆ ಆ 12 ಕ್ಷೇತ್ರಗಳಲ್ಲಿ ಸ್ಪರ್ಧಿಸೋ ರಣಕಲಿಗಳು ಯಾರು..? ಹೇಗಿರಲಿದೆ ಮೂರನೇ ಅಲೆಯ ಬಂಡಾಯ..?