ಸಿಕ್ಕ ಕಡಿಮೆ ಟೈಮ್‌ನಲ್ಲಿ ಬೊಮ್ಮಾಯಿ ಮಾಮ ಚೆನ್ನಾಗಿ ಕೆಲಸ ಮಾಡಿದ್ದಾರೆ: ಕಿಚ್ಚ ಸುದೀಪ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಹಾಗೇ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗಿಯಾಗಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಹಾಗೇ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗಿಯಾಗಿ, ಕಡಿಮೆ ಸಮಯದಲ್ಲಿ ತುಂಬಾ ಒಳ್ಳೇ ಕೆಲಸ ಮಾಡಿದವರು ಬೊಮ್ಮಾಯಿ ಮಾಮ ಎಂದರೆ ತಪ್ಪಾಗಲಾದರು ಎಂದು ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು ನಾಮ್‌ಕೆ ವಾಸ್ತೆ ಅಲ್ಲ ಕಾಮ್‌ಕೇ ವಾಸ್ತೆ ಎನ್ನುವ ಮಾತು ಹಿಂದಿಯಲ್ಲಿದೆ. ಸಿಎಂ ಅವರಲ್ಲಿ ನಾನು ನೋಡ್ತೀನಿ. ಅವರಿಗೆ ಸಿಕ್ಕಿರುವ ಸಮಯ ಬಹಳ ಕಡಿಮೆ. ಅವರಿಗೆ ಕೆಲಸ ಮಾಡಲು ಅವಕಾಶ ಬೇಕು. ಸುಮ್‌ಸುಮ್ನೆ ಕ್ಯಾಂಪೇನ್‌ಗೆ ಬರಲ್ಲ. ಒಳ್ಳೆ ಕೆಲಸಗಳು ಆಗ್ಲಿ ಎಂದು ಬರುತ್ತೇವೆ. ಶಿಗ್ಗಾವಿ ಮತದಾರರ ಸಹಕಾರದಿಂದ ಬೊಮ್ಮಾಯಿ ಮಾಮನನ್ನು ಗೆಲ್ಲಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.