ನಾನು ಸಿದ್ದರಾಮಯ್ಯ ಅವರ ಅಭಿಮಾನಿ: ದುನಿಯಾ ವಿಜಯ್‌

ವರುಣದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ
ಸಿದ್ದು ಪರ ನಟ ದುನಿಯಾ ವಿಜಯ್‌ ಕ್ಯಾಂಪೇನ್‌
ಕಲಾವಿದರ ದಂಡಿನೊಂದಿಗೆ ಸಿದ್ದು ರೋಡ್ ಶೋ

First Published May 5, 2023, 6:49 PM IST | Last Updated May 5, 2023, 6:50 PM IST

ಮೈಸೂರು: ವರುಣಾದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡುತ್ತಿದ್ದು, ಸಿದ್ದು ಪರ ನಟ ದುನಿಯಾ ವಿಜಯ್‌, ಯೋಗೀಶ್‌ ಸಹ ಕ್ಯಾಂಪೇನ್‌ ನಡೆಸಿದರು. ನಟ-ನಟಿಯರನ್ನು ನೋಡಲು ಅಭಿಮಾನಿಗಳ ದಂಡು ಹರಿದು ಬಂದಿತ್ತು. ಸುಮಾರು 23 ಗ್ರಾಮಗಳಲ್ಲಿ ಸಿದ್ದರಾಮಯ್ಯ ಅಬ್ಬರ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ನಟ ದುನಿಯಾ ವಿಜಯ್‌, ನಾನು ಅವರ ಅಭಿಮಾನಿ. ಅವರು ಬಡವರ ಮೇಲೆ ಹೊಂದಿರುವ ಕಾಳಜಿ, ಅವರು ಸಲ್ಲಿಸಿರುವ ಸೇವೆಗೆ ನಾನು ಅಭಿಮಾನಿಯಾಗಿದ್ದೇನೆ. ಅವರು ಈ ಸಾರಿ ಗೆಲ್ಲಲೇ ಬೇಕು ಎಂಬ ಆಸೆ. ಇದಕ್ಕೆ ವರುಣ ಕ್ಷೇತ್ರದ ಜನ ಕೈಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ದುನಿಯಾ ವಿಜಯ್‌ ಹೇಳಿದರು.

ಇದನ್ನೂ ವೀಕ್ಷಿಸಿ: ಸಂಸದ ಪ್ರತಾಪ್ ಸಿಂಹ ಅಸಮಾಧಾನಕ್ಕೆ ನಟ ಶಿವರಾಜ್‌ಕುಮಾರ್ ತಿರುಗೇಟು...

Video Top Stories