ಆಪರೇಷನ್ ಹಸ್ತದ ಮೇಲೆ ನಿಂತಿದೆ ಆ 6 ಕ್ಷೇತ್ರಗಳ ಭವಿಷ್ಯ: ಕಾಂಗ್ರೆಸ್ ತೋಡಿದ ಖೆಡ್ಡಾಗೆ ಬೀಳ್ತಾರಾ ಕೇಸರಿ ಕಲಿಗಳು?

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ ಅಂತ ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಆದ್ರೆ 28 ಕ್ಷೇತ್ರಗಳ ಪೈಕಿ ಕನಿಷ್ಠ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್'ಗೆ ಗೆಲ್ಲುವ ಅಭ್ಯರ್ಥಿಗಳೇ ಇಲ್ಲ. ಹಾಗಾದ್ರೆ ಉಳಿದ 22 ಅಖಾಡಗಳ ಕಥೆಯೇನು..? ಟಾರ್ಗೆಟ್ 20 ರೀಚ್ ಆಗಲು ಕಾಂಗ್ರೆಸ್ ಮಾಸ್ಟರ್'ಪ್ಲಾನ್ ಹೇಗಿದೆ? 

First Published Dec 23, 2023, 9:00 PM IST | Last Updated Dec 23, 2023, 9:00 PM IST

ಬೆಂಗಳೂರು(ಡಿ.23):  ವಿಧಾನಸಭಾ ಚುನಾವಣೆಯಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಅಬ್ಬರಿಸಿರೋ ಕಾಂಗ್ರೆಸ್'ಗೆ ಲೋಕಸಭಾ ಚುನಾವಣೆಯಲ್ಲೂ ಸಿಕ್ಸರ್ ಬಾರಿಸೋ ಉತ್ಸಾಹ. ಅಲ್ಲಿ ಪಕ್ಕಾ 136ರ ಗುರಿ ಇಟ್ಟು, ಹೊಡೆದ ಕೈ ಪಾಳೆಯ ಇಲ್ಲಿ ಮಿಷನ್ ಟ್ವೆಂಟಿ ಮಂತ್ರ ಜಪಿಸ್ತಾ ಇದೆ. ಮಂತ್ರ-ತಂತ್ರ-ರಣತಂತ್ರಗಳ ರಣಯುದ್ಧದಲ್ಲಿ ಕಾಂಗ್ರೆಸ್'ಗೆ ಎದುರಾಗಿದೆ ಸಿಕ್ಸರ್ ಚಾಲೆಂಜ್. ಈ ಚಾಲೆಂಜ್ ಗೆಲ್ಲೋದಕ್ಕೆ ಬಿಜೆಪಿ ನಾಯಕರೇ ಕೈಗೆ ಆಪತ್ಬಾಂಧವರು. ಇದು ಹೇಗೆ ಸಾಧ್ಯ ಅಂತೀರಾ..? ಈ ಸ್ಟೋರಿ ನೋಡಿ.

ಬೆಂಗಳೂರು ಉತ್ತರ, ಮೈಸೂರು-ಕೊಡಗು ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್'ಗೆ ಗೆಲ್ಲುವ ಕುದುರೆಗಳಿಲ್ಲ. ಹೀಗಾಗಿ ಅಲ್ಲಿ ಬಿಜೆಪಿ ನಾಯಕರ ಬರುವಿಕೆಗೆ ಕೈ ಪಾಳೆಯ ಕಾಯುತ್ತಿದೆ. ಇದೇ ರೀತಿ ಇನ್ನೂ ಮೂರು ಕ್ಷೇತ್ರಗಳಿವೆ. ಅಲ್ಲೂ ಇದೇ ಕಥೆ. ಸಿಕ್ಸರ್ ಚಾಲೆಂಜ್'ನ ಆ ಮೂರು ಕ್ಷೇತ್ರಗಳು ಯಾವುವು, ಅಲ್ಲಿನ ಕಥೆಯೇನು ನೋಡೋಣ. 

ಕರ್ನಾಟಕದ ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ, ಸಿಎಂ ಸಿದ್ದರಾಮಯ್ಯ ಘೋಷಣೆ!

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ನ ಮೇನ್ ಟಾರ್ಗೆಟ್ ಮಿಷನ್ 20. ಅಂದ್ರೆ 20 ಲೋಕಸಭಾ ಸ್ಥಾನಗಳನ್ನು ಗೆಲ್ಲೋದು. ಆದ್ರೆ 6 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳೇ ಕೈ ಪಾಳೆಯದಲ್ಲಿ ಕಾಣಿಸ್ತಿಲ್ಲ. ಆ ಪೈಕಿ ಮೂರು ಕ್ಷೇತ್ರಗಳ ಗುಟ್ಟನ್ನು ನೋಡಿದ್ದಾಯ್ತು..? ಆರರಲ್ಲಿ ಉಳಿದ ಮೂರು ಕ್ಷೇತ್ರಗಳ ಕಥೆಯೇನು..? ಅಲ್ಲಿ ಕಾಂಗ್ರೆಸ್ ಆಪರೇಷನ್ ಖೆಡ್ಡಾ ತೋಡಿ ಕಾಯ್ತಿರೋ ಕೇಸರಿ ಕಲಿಗಳು ಯಾರು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಈ ಸಿಕ್ಸರ್ ಚಾಲೆಂಜ್ ಗೆದ್ರೆ, ಕಾಂಗ್ರೆಸ್ ಮಿಷನ್ 20 ಟಾರ್ಗೆಟ್ ರೀಚ್ ಆಗುತ್ತಾ..? ಉಳಿದ 22 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್'ಗೆ ಗೆಲ್ಲುವ ಕುದುರೆಗಳಿದ್ದಾರಾ..? ಟಾರ್ಗೆಟ್ 20 ಗುರಿ ತಲುಪಲು  ಕಾಂಗ್ರೆಸ್ ಮಾಸ್ಟರ್'ಪ್ಲಾನ್ ಏನು ನೋಡೋಣ, ಮತ್ತೊಂದು ಬ್ರೇಕ್'ನ ನಂತ್ರ.

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ತೀವಿ ಅಂತ ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಆದ್ರೆ 28 ಕ್ಷೇತ್ರಗಳ ಪೈಕಿ ಕನಿಷ್ಠ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್'ಗೆ ಗೆಲ್ಲುವ ಅಭ್ಯರ್ಥಿಗಳೇ ಇಲ್ಲ. ಹಾಗಾದ್ರೆ ಉಳಿದ 22 ಅಖಾಡಗಳ ಕಥೆಯೇನು..? ಟಾರ್ಗೆಟ್ 20 ರೀಚ್ ಆಗಲು ಕಾಂಗ್ರೆಸ್ ಮಾಸ್ಟರ್'ಪ್ಲಾನ್ ಹೇಗಿದೆ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

Video Top Stories